ಮರದಲ್ಲಿ ಕರುವಿನ ಕಳೇಬರ ಪತ್ತೆ ಚಿರತೆ ಕೃತ್ಯ ಶಂಕೆ ಕಾರ್ಮಿಕರಲ್ಲಿ ಆತಂಕ

leopard
Published on

ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಮದ ಕಣಿಯಾರ್‌ಮಲೆ ರಕ್ಷಿತಾರಣ್ಯ ಸಮೀಪದ ಅರ್ತ್ಯಡ್ಕದ ರಬ್ಬರ್ ತೋಟದ ಮರದ ಕೊಂಬೆ ನಡುವೆಯಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ದನದ ಕರುವೊಂದರ ಕಳೇಬರ ಪತ್ತೆಯಾಗಿದ್ದು, ಚಿರತೆಯ ಕೃತ್ಯ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.


ಕರುವಿನ ದೇಹದ ಕೆಲವು ಭಾಗಗಳನ್ನು ಯಾವುದೋ ಕಾಡುಪ್ರಾಣಿ ಮಾಂಸ ತಿಂದಿದೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಮಾಹಿತಿ ನೀಡಿದ್ದರು. ಪುತ್ತೂರು ಆರ್‌ಎಫ್‌ಒ ಕಿರಣ್, ನರಿಮೊಗರು ಡಿಆರ್‌ಎಫ್‌ಒ ಕುಮಾರಸ್ವಾಮಿ, ಆನೆಗುಂಡಿ ಡಿಆರ್‌ಎಫ್‌ಒ ಅರಣ್ಯಾಧಿಕಾರಿ ಲೋಕೇಶ್, ಕೆಎಫ್‌ಡಿಸಿ ರೇಂಜರ್ ಪ್ರದೀಪ್ ರೈ, ಎಡಿಎಂ ಅರುಣ್ ಮತ್ತು ಸಿಬ್ಬಂದಿ ದೀಪಕ್, ಚಿದಾನಂದ, ಶೀನಪ್ಪ ಪರಿಶೀಲನೆ ನಡೆಸಿ, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್. ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಕರುವಿನ ಮೃತದೇಹದ ದಫನ ಮಾಡಿದರು. ಚಿರತೆ ದಾಳಿ ಹಿನ್ನೆಲೆಯಲ್ಲಿ ಪೆರ್ಲಂಪಾಡಿ, ಕೆಯ್ಯೂರು ರಬ್ಬರ್ ಘಟಕದ ಕಾರ್ಮಿಕರು ಮತ್ತು ಸ್ಥಳೀಯರು ಆತಂಕಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net