642 ಪ್ರಕರಣ ರಾಜಿಯಲ್ಲಿ ಇತ್ಯರ್ಥ PUTTUR

ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರ ನ್ಯಾಯಾಲಯದಲ್ಲಿ ಲೋಕ ಅದಾಲತ್‌ ನಡೆಯಿತು. ವಕೀಲ ರಾಕೇಶ್‌ ಜೆ. ಮಸ್ಕರೇನಸ್‌ ಇದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರ ನ್ಯಾಯಾಲಯದಲ್ಲಿ ಲೋಕ ಅದಾಲತ್‌ ನಡೆಯಿತು. ವಕೀಲ ರಾಕೇಶ್‌ ಜೆ. ಮಸ್ಕರೇನಸ್‌ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುತ್ತೂರಿನಲ್ಲಿ ಲೋಕ ಅದಾಲತ್‌
ಪುತ್ತೂರು: ನ್ಯಾಯಾಲಯದ ಲೋಕ ಅದಾಲತ್‌ನಲ್ಲಿ ಒಟ್ಟು 9133 ಪ್ರಕರಣಗಳಲ್ಲಿ 880 ಪ್ರಕರಣಗಳನ್ನು ಸಂಧಾನಕ್ಕೆ ಪ್ರಯತ್ನಿಸಲಾಗಿದ್ದು, ಈ ಪೈಕಿ 642 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ 3,50,12,641 ರೂ. ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಗಿದೆ.
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 64 ಪ್ರಕರಣಗಳಲ್ಲಿ 8 ಇತ್ಯರ್ಥಗೊಂಡಿದ್ದು, 29,20,184 ರೂ. ಪರಿಹಾರ, ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದಲ್ಲಿ 304 ಪ್ರಕರಣಗಳಲ್ಲಿ 245 ಇತ್ಯರ್ಥಗೊಂಡಿದ್ದು, 1,07,83,350 ರೂ. ಪರಿಹಾರ ವಿತರಣೆಗೆ ಆದೇಶವಾಗಿದೆ.
ಅಪರ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ 147 ಪ್ರಕರಣಗಳಲ್ಲಿ 128 ಪ್ರಕರಣ ಇತ್ಯರ್ಥಗೊಂಡು 1,40,76,000 ರೂ. ಹಾಗೂ ಪ್ರಧಾನ ಸಿವಿಲ್‌ ನ್ಯಾಯಾ˜ಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 186 ಪ್ರಕರಣಗಳಲ್ಲಿ 173 ಪ್ರಕರಣಗಳು ಇತ್ಯರ್ಥಗೊಂಡಿದ್ದು, 52,52,411 ರೂ. ವಿತರಣೆಗೆ ಆದೇಶ ನೀಡಲಾಗಿದೆ.
ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 174 ಪ್ರಕರಣಗಳಲ್ಲಿ 85 ಇತ್ಯರ್ಥಗೊಂಡಿದ್ದು, 19,28,768 ರೂ. ವಿತರಣೆಗೆ ಆದೇಶ ಆಗಿದೆ. 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 5 ಪ್ರಕರಣಗಳಲ್ಲಿ 3 ಪ್ರಕರಣ ಇತ್ಯರ್ಥಗೊಂಡಿದ್ದು, 51,928ರೂ. ವಿತರಣೆಗೆ ಆದೇಶಿಸಲಾಗಿದೆ.
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ವಕೀಲ ರಾಕೇಶ್‌ ಜೆ.ಮಸ್ಕರೇನಸ್‌, ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ, ವಕೀಲೆ ವನಿತಾ, ಅಪರ ಹಿರಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ದೇವರಾಜ್‌ ವೈ.ಎಚ್‌., ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ, ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ರಮ್ಯಾ ಆರ್‌., ವಕೀಲ ಅನೀಶ್‌ ಪಿ. ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net