ಶಾಸಕ ಅಶೋಕ್ ಕುಮಾರ್ ರೈಗೆ ಸಚಿವ ಸ್ಥಾನ? MLA

ಶಾಸಕ ಅಶೋಕ್ ಕುಮಾರ್ ರೈ
ಶಾಸಕ ಅಶೋಕ್ ಕುಮಾರ್ ರೈ
Published on

ಪ್ರಮುಖ ಮುಖ್ಯಾಂಶಗಳು

  • ಹೈಕಮಾಂಡ್ ಬುಲಾವ್, ದೆಹಲಿಗೆ ತೆರಳಿದ ಶಾಸಕ
ಪುತ್ತೂರು: ಕಾಂಗ್ರೆಸ್ ಸರ್ಕಾರದ ಎರಡನೇ ಅವಽಯ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಽಕಾರ ಸ್ವೀಕರಿಸುತ್ತಿದ್ದಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅಶೋಕ್ ಕುಮಾರ್ ರೈ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಮತ್ತೊಮ್ಮೆ ಗರಿಗೆದರಿದೆ.
ಡಿಕೆಶಿ ಸಚಿವ ಸಂಪುಟದಲ್ಲಿ ಮೊದಲ ಹಂತದಲ್ಲಿ ಕೈತಪ್ಪಿದರೂ ಎರಡನೇ ಹಂತದಲ್ಲಿ ಅಶೋಕ್ ಕುಮಾರ್ ರೈಗೆ ಸಚಿವ ಸ್ಥಾನ ನಿಶ್ಚಿತ ಎಂಬ ಮಾತು ಸಿಎಂ ಪ್ರಮಾಣ ವಚನದ ವೇಳೆ ಹರಿದಾಡಿತ್ತು. ಸಚಿವ ಸ್ಥಾನಕ್ಕಾಗಿ ಸರ್ವಧರ್ಮೀಯರು ದೇವರ ಮೊರೆ ಹೊಗಿದ್ದರು.

*ಹೈಕಮಾಂಡ್ ಬುಲಾವ್:

ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಕೆಲವೇ ದಿನದಲ್ಲಿ ನಡೆಯಲಿದ್ದು, ಈ ನಡುವೆ ಶಾಸಕ ರೈಗೆ ದೆಹಲಿಯಿಂದ ಬುಲಾವ್ ಬಂದಿದೆ. ಹೈಕಮಾಂಡ್ ಕರೆಸಿದ ಉದ್ದೇಶ ಬಹಿರಂಗಗೊಳ್ಳದಿದ್ದರೂ, ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಕತೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕೆಲವು ಮೂಲಗಳ ಪ್ರಕಾರ ಕರಾವಳಿಯಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಸಮರ್ಥ ನಾಯಕತ್ವ ಬೇಕಾದ ಕಾರಣ ಕರಾವಳಿಗೆ ಸಂಬಂಽಸಿದ ಖಾತೆಯನ್ನೇ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net