ನಗರಾದ್ಯಂತ ಬೃಹತ್ ಅಕ್ರಮ ಅಂಗಡಿಗಳು, ಕಟ್ಟಡಗಳು ತಲೆಎತ್ತಿ ನಿಂತಿದ್ದು, ಅವುಗಳನ್ನು ಮುಟ್ಟಲು ಅಥವಾ ತೆರವುಗೊಳಿಸಲು ನಗರಸಭೆಯ ಅಧಿಕಾರಿಗಳು ಮುಂದಾಗಿಲ್ಲ. ಫುಟ್‌ಪಾತ್ ಹಾಗೂ ರಸ್ತೆ ಬದಿಗಳಲ್ಲಿ ಹತ್ತಾರು ಅನಧಿಕೃತವಾಗಿ ಹೊರ ಊರಿನ ವ್ಯಾಪಾರಿಗಳು ವ್ಯಾಪಾರ ನಡೆಸಿದರೂ ಕ್ರಮವಾಗುತ್ತಿಲ್ಲ. ರಸ್ತೆ ಪರಂಬೋಕು ಹಾಗೂ ತೋಡುಗಳನ್ನು ಮುಚ್ಚಿದರೂ ಕ್ರಮ ಆಗುತ್ತಿಲ್ಲ. ಅಕ್ರಮಗಳ ಬಗ್ಗೆ ದೂರುಗಳು ಬಂದರೂ ನಗರಸಭೆ ಕಣ್ಣು ಮುಚ್ಚಿ ಕುಳಿತಿದೆಯೇ ಹೊರತು ಒಂದೇ ಒಂದು ಕ್ರಮ ಕೈಗೊಂಡಿಲ್ಲ ಎಂಬ ಅರೋಪ ವ್ಯಕ್ತವಾಗಿದೆ.