ಬೆದ್ರಾಳ ಎಸ್‌ಟಿಪಿ ಘಟಕಕ್ಕೆ ಗ್ರಹಣ Puttur

ನಗರಸಭೆ ಅನುದಾನದಲ್ಲಿ ಬೆದ್ರಾಳದ ಎಸ್‌ಟಿಪಿ ಘಟಕಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
ನಗರಸಭೆ ಅನುದಾನದಲ್ಲಿ ಬೆದ್ರಾಳದ ಎಸ್‌ಟಿಪಿ ಘಟಕಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳಕ್ಕೆ ತೆರಳುವ ರಸ್ತೆಯೂ ನಾಪತ್ತೆ
  • ಖಾಸಗಿ ಒತ್ತುವರಿಗೆ ಬಲಿಯಾಗುವ ಆತಂಕ
ಪುತ್ತೂರು: ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಆದರೆ ಬೆದ್ರಾಳದಲ್ಲಿ ಎಸ್‌ಟಿಪಿ ಘಟಕಕ್ಕೆ ೫ ಎಕರೆ ಜಮೀನು ಕಂದಾಯ ಇಲಾಖೆ ನೀಡಿದ್ದು, ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಯ ಜಮೀನು ಖಾಸಗಿಯವರ ಪಾಲಾಗಿದೆ ಮತ್ತು ಎಸ್‌ಟಿಪಿ ಘಟಕಕ್ಕೆ ಕಾಯ್ದಿರಿಸಿದ ಜಾಗವೂ ಒತ್ತುವರಿಗೆ ಬಲಿಯಾಗುವ ಆತಂಕ ವ್ಯಕ್ತವಾಗಿದೆ.
ಪುತ್ತೂರು ಪೇಟೆಯಲ್ಲಿ -ಟ್‌ಗಳು, ಸಭೆ ಸಮಾರಂಭ ನಡೆಸುವ ಹಾಲ್‌ಗಳು, ಹೊಟೇಲ್ ಉದ್ಯಮ ವೇಗವಾಗಿ ಬರುತ್ತಿದ್ದು, ಇದರ ಮಲಿನ ನೀರು ಹೋಗುವುದಕ್ಕೆ ಸಮರ್ಪಕ ವ್ಯವಸ್ಥೆಯಿಲ್ಲದಾಗಿದೆ. ಇದರ ಅಂಗವಾಗಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸುವ ಪ್ರಸ್ತಾಪ ೨೦೧೭ರಲ್ಲಿ ಪ್ರಾರಂಭವಾಗಿದ್ದು, ಚಿಕ್ಕಮುಡ್ನೂರು ಗ್ರಾಮದಲ್ಲಿ ೫ ಎಕರೆ ಜಮೀನು ಕಾಯ್ದಿರಿಸಲಾಗಿದೆ.
ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಶಾಸಕರಾಗುತ್ತಿದ್ದಂತೆ ಒಳಚರಂಡಿಗೆ ಹೆಚ್ಚಿನ ಒತ್ತು ನೀಡಿದ್ದು, ಈಗ ವ್ಯಾಕ್ಯೂಮ್ ತಂತ್ರಜ್ಞಾನದಲ್ಲಿ ತ್ಯಾಜ್ಯವನ್ನು ಒಂದೆಡೆಗೆ ತೆಗೆದುಕೊಂಡು ಹೋಗುವ ಯೋಜನೆಗೆ ಕೈಹಾಕಿದ್ದಾರೆ. ದೇಶದಲ್ಲೇ ಮೊದಲ ಪೈಲಟ್ ಯೊಜನೆಯಾಗಿ ಅನುಷ್ಠಾನವಾಗಲಿದ್ದು, ಇದಕ್ಕೆ ಜಮೀನು ತಕರಾರು ಅಡ್ಡಿಯಾಗಿದೆ.

ಕರ್ತವ್ಯಕ್ಕೆ ಅಡ್ಡಿ ಪ್ರಕರಣ

ಎರಡು ವರ್ಷದ ಹಿಂದೆ ಖಾಸಗಿ ವ್ಯಕ್ತಿಗಳು ಎಸ್‌ಟಿಪಿ ಘಟಕ ನಿರ್ಮಾಣ ಸ್ಥಳಕ್ಕೆ ಹೋಗುವ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ರಸ್ತೆಯನ್ನು ಮುಚ್ಚಿದ್ದಾರೆ. ಸ್ಥಳಕ್ಕೆ ತೆರಳಿದ ಕಂದಾಯ ಹಾಗೂ ನಗರಸಭೆ ಅಽಕಾರಿಗಳು ರಸ್ತೆಯನ್ನು ಮುಚ್ಚದಂತೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭ ಸರ್ಕಾರಿ ಅಽಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ ಪ್ರಕರಣ ದಾಖಲಾಗಿತ್ತು.

ರಸ್ತೆಗೆ ಇಂಟರ್‌ಲಾಕ್ ವ್ಯವಸ್ಥೆ

ಘಟಕಕ್ಕೆ ಮೀಸಲಿಟ್ಟ ೫ ಎಕರೆ ಸ್ಥಳಕ್ಕೆ ತೆರಳುವ ರಸ್ತೆಯನ್ನು ನಗರಸಭೆ ಅಭಿವೃದ್ಧಿ ಗೊಳಿಸಲಾಗಿತ್ತು. ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿತ್ತು. ಆದರೆ ಸದ್ಯ ಈ ರಸ್ತೆಯ ಕುರುಹು ಕೂಡ ಇರದಂತೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಇದರ ಜತೆಗೆ ನಗರಸಭೆಯ ಅನುದಾನವನ್ನು ವ್ಯರ್ಥಗೊಳಿಸಲಾಗಿದೆ.
"

ಬೆದ್ರಾಳ ಎಸ್‌ಟಿಪಿ ಘಟಕ ನಿರ್ಮಾಣದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಕ್ರಮ ಬಗ್ಗೆ ದಾಖಲೆ ಸಹಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಲ್ಲಿ ಸಲ್ಲಿಸಿದ್ದು, ನೋಟಿಸ್ ಜಾರಿಯಾಗಿದೆ. ಬೇರೆ ಬೇರೆ ರೀತಿಯಲ್ಲಿ ಕಾನೂನು ಹೋರಾಟ ನಡೆಸಲಾಗುತ್ತದೆ. ಮಲತ್ಯಾಜ್ಯ ಘಟಕ ಬೆದ್ರಾಳದಲ್ಲಿ ಆಗಿಯೇ ಆಗುತ್ತದೆ. ಘಟಕಕ್ಕೆ ಹೋಗುವ ರಸ್ತೆ ಜಾಗವನ್ನು ಖರೀದಿ ಮಾಡಿದ್ದು, ಟ್ರೆಸ್‌ಪಾಸ್ ನಡೆಸದಂತೆ ಇಂಜೆಕ್ಷನ್ ಪಡೆದಿದ್ದರೂ, ನಗರಸಭೆ ರಸ್ತೆಗೆ ಬೇಕಾದ ಭೂ ಸ್ವಾಽನಕ್ಕೆ ಅಗತ್ಯ ಕ್ರಮಕೈಗೊಂಡಿದೆ. ಯಾವುದೇ ರಿಯಲ್ ಎಸ್ಟೇಟ್ ಉದ್ಯಮಿಗೆ ಸರ್ಕಾರಿ ವ್ಯವಸ್ಥೆಯ ಜತೆಗೆ ಗುದ್ದಾಟ ಮಾಡುವುದು ಸಾಧ್ಯವಿಲ್ಲ.

— ಎಚ್. ಮಹಮ್ಮದ್ ಆಲಿ ಮಾಜಿ ಸದಸ್ಯರು


"

ಪುತ್ತೂರು ನಗರದ ಒಳಚರಂಡಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಅಗತ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹೊಸ ತಂತ್ರಜ್ಞಾನದ ಮೂಲಕ ಹಂತ ಹಂತದಲ್ಲಿ ಕೆಲಸ ನಡೆಯಲಿದೆ. ಈಗಾಗಲೇ ಬೆದ್ರಾಳದಲ್ಲಿ ಎಸ್‌ಟಿಪಿ ಘಟಕಕ್ಕೆ ಜಾಗವನ್ನು ನಗರಸಭೆ ಗುರುತಿಸಿದ್ದು, ಅಲ್ಲೇ ಕಾಮಗಾರಿ ನಡೆಯಲಿದೆ. ಇದಕ್ಕೆ ಅಡ್ಡಿಯಾಗುವ ಗೋಡೆಗಳನ್ನು ಗುದ್ದಿ ತೆಗೆಯುತ್ತೇವೆ.

— ಅಶೋಕ್ ಕುಮಾರ್ ರೈ ಶಾಸಕರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net