ಯುವಜನತೆ ದಾರಿತಪ್ಪಿಸುವ ಜಾಲಗಳು ಸಕ್ರಿಯ PUTTUR

ಫಿಟ್ ಇಂಡಿಯಾ ಮಾದಕ ದ್ರವ್ಯಮುಕ್ತ ೫ ಕೆ ಮ್ಯಾರಥಾನ್‌ಗೆ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಚಾಲನೆ ನೀಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಽಕ್ಷಕ ಅನಿಲ್ ಎಸ್.ಭೂಮರೆಡ್ಡಿ, ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ನ ಬಲರಾಮ ಆಚಾರ್ಯ ಇತರರು ಇದ್ದರು.
ಫಿಟ್ ಇಂಡಿಯಾ ಮಾದಕ ದ್ರವ್ಯಮುಕ್ತ ೫ ಕೆ ಮ್ಯಾರಥಾನ್‌ಗೆ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಚಾಲನೆ ನೀಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಽಕ್ಷಕ ಅನಿಲ್ ಎಸ್.ಭೂಮರೆಡ್ಡಿ, ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ನ ಬಲರಾಮ ಆಚಾರ್ಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಕಳವಳ
  • ಫಿಟ್ ಇಂಡಿಯಾ ೫ಕೆ ಮ್ಯಾರಥಾನ್
ಪುತ್ತೂರು: ಒಮ್ಮೆ ಮಾದಕ ವಸ್ತುವಿನ ವ್ಯಸನಕ್ಕೆ ಬಲಿಯಾದರೆ ಅದರಿಂದ ಮತ್ತೆ ಹೊರಬರಲು ಸಾಧ್ಯವಾಗದೆ ಜೀವನವೇ ಹಾಳಾಗುತ್ತದೆ. ಪ್ರತಿವರ್ಷ ಸುಮಾರು ೧೨ ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಯುವಜನತೆಯನ್ನು ಈ ಜಾಲಕ್ಕೆ ಸಿಲುಕಿಸಿ ದೇಶದ್ರೋಹಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಮಾಜಘಾತುಕ ಶಕ್ತಿಗಳು ಸಕ್ರಿಯವಾಗಿವೆ. ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಡ್ರಗ್ಸ್ ಪೈಕಿ ಕೇವಲ ಶೇ.೫ ರಿಂದ ೧೦ರಷ್ಟನ್ನು ಮಾತ್ರ ಪೊಲೀಸರು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಐದನೇ ಹೆಚ್ಚುವರಿ ಜಿ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಕಳವಳ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯ ಜನಜಾಗೃತಿ ಅಂಗವಾಗಿ ಪುತ್ತೂರು ಉಪವಿಭಾಗದ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಆಯೋಜಿಸಿದ್ದ ಫಿಟ್ ಇಂಡಿಯಾ ಮಾದಕ ದ್ರವ್ಯಮುಕ್ತ ೫ ಕೆ ಮ್ಯಾರಥಾನ್ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಎಸ್.ಭೂಮ ರೆಡ್ಡಿ ಮಾತನಾಡಿ ಭಾರತದಲ್ಲಿರುವ ೧೪೦ ಕೋಟಿ ಭಾರತೀಯರಲ್ಲಿ ಸುಮಾರು ೬೦ ಕೋಟಿಗೂ ಮಿಕ್ಕಿ ಯುವ ಸಮುದಾಯವಿದೆ. ಯುವ ಮನಸ್ಸಿನಲ್ಲಿ ದುಷ್ಪರಿಣಾಮದ ಎಚ್ಚರಿಕೆಯ ಬೀಜವನ್ನು ಭಿತ್ತಿದಾಗ ಮುಂದೆ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಮೂಡಿ ಬರುತ್ತಾರೆ ಎಂದರು.
೬೪೨ ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಜಿಎಲ್ ಆಚಾರ್ಯ ಜುವೆಲ್ಲರ್ಸ್‌ನ ಬಲರಾಮ ಆಚಾರ್ಯ, ತಾಲೂಕು ಆರೋಗ್ಯಾಽಕಾರಿ ಡಾ.ದೀಪಕ್ ರೈ, ಪುತ್ತೂರು ನಗರ ಠಾಣೆ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ಮಹಿಳಾ ಠಾಣೆ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ಸುಳ್ಯ ಠಾಣೆಯ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಉಪಸ್ಥಿತರಿದ್ದರು.
ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರೋಡ್ರಿಗಸ್, ನರೇಶ್ ಲೋಬೊ, ದಾಮೋದರ್, ಪ್ರವೀಣ್ ಪಾಪೆಮಜಲು, ರಾಜೇಶ್ ಪಿಡಿ, ಅಶ್ರಫ್, ಪ್ರಕಾಶ್ ಡಿಸೋಜ, ಪ್ರಮೀಳಾ, ಅಜಿತ್ ತೀರ್ಪುಗಾರಾಗಿ ಸಹಕರಿಸಿದರು.

ವಿವಿಧ ವಿಭಾಗಗಳ ಬಹುಮಾನ ವಿಜೇತರು

ಪ್ರತ್ಯೇಕ ವಿಭಾಗದಲ್ಲಿ ೫ ಕಿ.ಮೀ. ಮ್ಯಾರಥಾನ್ ನಡೆಯಿತು. ೫೦ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಲೊಕೇಶ್(ಪ್ರ), ಪ್ರಮೋದ್ ರೈ(ದ್ವಿ), ಮಂಜುನಾಥ್ ವೈ.ಕೆ.(ತೃ), ಮಹಿಳೆಯ ವಿಭಾಗದಲ್ಲಿ ದಮಯಂತಿ (ಪ್ರ), ಬಿ.ಎಲ್.ಮಂಜುಳಾ(ದ್ವಿ), ಸುಭದ್ರಾ (ತೃ), ೧೯ರಿಂದ ೩೫ ವಯೋಮಾನದ ಮಹಿಳಾ ವಿಭಾಗದಲ್ಲಿ ಆಕೃತಿ(ಪ್ರ), ರಶ್ಮಿತಾ(ದ್ವಿ), ತೇಜಸ್ವಿ (ತೃ), ಪುರುಷರ ವಿಭಾಗದಲ್ಲಿ ವಿಘ್ನೇಶ್ವರ ಸುರೇಶ್(ಪ್ರ), ವಿಶ್ವ ಎಂ. (ದ್ವಿ), ವಿಜಯ ಶ್ರೀಹರಿ (ತೃ), ೩೬ ರಿಂದ ೫೦ ವರ್ಷದ ವಯೋಮಾನದ ಪುರುಷರ ವಿಭಾಗದಲ್ಲಿ ವಿನಯ ಕುಮಾರ್ (ಪ್ರ), ಜಯರಾಮ್ ಪಿ.ಪಿ. (ದ್ವಿ), ಬಾಲಕೃಷ್ಣ ಗೌಡ (ತೃ), ಮಹಿಳಾ ವಿಭಾಗದಲ್ಲಿ ಪ್ರಮೀಳಾ ಕೆ. (ಪ್ರ), ಪುಷ್ಪಾವತಿ (ದ್ವಿ), ದಿವ್ಯಾ ಎಂ. (ತೃ), ೧೮ ವರ್ಷ ವಯೋಮಾನದ ಹುಡುಗರ ವಿಭಾಗದಲ್ಲಿ ದಯಾನಂದ ಗೌಡ (ಪ್ರ), ಕೃಪಾಲ್ ಕೆ.(ದ್ವಿ), ಸಾಯಿ ಕೀರ್ತನ್ ಕೆ. (ತೃ), ಹುಡುಗಿಯರ ವಿಭಾಗದಲ್ಲಿ ಮೋಕ್ಷಾ ಪಿ. (ಪ್ರ), ನಿಶಾ ಜಿ.ಎಸ್. (ದ್ವಿ), ಪ್ರಮೀಳಾ (ತೃ) ಸ್ಥಾನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net