ಅಂಬಿಕಾದಲ್ಲಿ ನೀಟ್‌ ರಿಪೀಟರ್ಸ್‌ ಬ್ಯಾಚ್‌ಗೆ ದಾಖಲಾತಿ ಆರಂಭ PUTTUR

ಬಪ್ಪಳಿಗೆಯಲ್ಲಿರುವ ಅಂಬಿಕಾ ರೆಸಿಡೆನ್ಶಿಯಲ್‌ ಪದವಿ ಪೂರ್ವ ಕಾಲೇಜು.
ಬಪ್ಪಳಿಗೆಯಲ್ಲಿರುವ ಅಂಬಿಕಾ ರೆಸಿಡೆನ್ಶಿಯಲ್‌ ಪದವಿ ಪೂರ್ವ ಕಾಲೇಜು.
Published on

ಪ್ರಮುಖ ಮುಖ್ಯಾಂಶಗಳು

  • ತರಬೇತಿ ಪಡೆದ ಪ್ರತಿ ಮೂರು ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ ವೈದ್ಯಕೀಯ ಶಿಕ್ಷಣ ಖಚಿತ
ಪುತ್ತೂರು: ವೈದ್ಯರಾಗಬೇಕೆಂಬುದು ಅನೇಕ ವಿದ್ಯಾರ್ಥಿಗಳ ಕನಸು. ಬಹುತೇಕ ಪಾಲಕರೂ ತಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ಸಮಾಜದಲ್ಲಿ ಪ್ರತಿಷ್ಠಿತ ವೈದ್ಯರೆನಿಸಿಕೊಳ್ಳಬೇಕು ಎಂಬ ಕನಸು ಕಂಡಿರುತ್ತಾರೆ. ಇದಕ್ಕಾಗಿ ಪಿಯು ಹಂತದ ಶಿಕ್ಷಣದ ಜತೆಜತೆಗೆ ನೀಟ್‌ ಪರೀಕ್ಷಾ ತರಬೇತಿಗೂ ಹಲವಾರು ವಿದ್ಯಾರ್ಥಿಗಳು ದಾಖಲಾಗುತ್ತಾರೆ. ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸುವಲ್ಲಿ ರಾಷ್ಟ್ರಮಟ್ಟದ ನೀಟ್‌ ಪರೀಕ್ಷೆಯಲ್ಲಿ ಗಳಿಸುವ ಅಂಕವೇ ಪ್ರಧಾನ.
ದ್ವಿತೀಯ ಪಿಯು ಪೂರೈಸಿ ತಕ್ಷಣ ನೀಟ್‌ ಪರೀಕ್ಷೆಯನ್ನೂ ಎದುರಿಸಿ ಉತ್ತಮ ಅಂಕ ಗಳಿಸುವಲ್ಲಿ ಎಡವಿದ ವಿದ್ಯಾರ್ಥಿಗಳಿಗಾಗಿಯೇ ದಕ್ಷಿಣ ಕನ್ನಡದ ಪುತ್ತೂರಿನ ನಟ್ಟೋಜ ಫೌಂಡೇಶನ್‌ ಟ್ರಸ್ಟ್‌ ಮುನ್ನಡೆಸುತ್ತಿರುವ ಅಂಬಿಕಾ ನೀಟ್‌ ಅಕಾಡೆಮಿಯು ಕಳೆದ ಮೂರು ವರ್ಷಗಳಿಂದ ‘ನೀಟ್‌ ರಿಪೀಟರ್ಸ್‌ ಬ್ಯಾಚ್‌’ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಅಂಬಿಕಾ ಸಂಸ್ಥೆ ನೀಟ್‌ ಪರೀಕ್ಷೆಗೆ ಅತ್ಯುತ್ಕೃಷ್ಟ ತರಬೇತಿ ನೀಡುತ್ತಿದ್ದು ಪ್ರತಿ ವರ್ಷವೂ ಈ ಸಂಸ್ಥೆಯಿಂದ ಹಲವಾರು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಪಡೆಯುತ್ತಿದ್ದಾರೆ.
ಅನುಭವಿ ಪ್ರಾಧ್ಯಾಪಕರು: ಪ್ರತಿದಿನ ಪ್ರಾಯೋಗಿಕ ಅನುಭವ, ವಾರಕ್ಕೊಮ್ಮೆ ಪರೀಕ್ಷೆಗಳನ್ನು ನೀಟ್‌ ರಿಪೀಟರ್ಸ್‌ ತರಗತಿಗಳಲ್ಲಿ ನಡೆಸಲಾಗುತ್ತದೆ. ಜತೆಗೆ ಅನುಭವಿ ಪ್ರಾಧ್ಯಾಪಕರಿಂದ ನಿರಂತರ ಸಲಹೆ ಸೂಚನೆಗಳು, ಪರಸ್ಪರ ಸಂವಹನದ ಮೂಲಕ ಚರ್ಚಾ ತರಗತಿಗಳು, ವ್ಯಾಪಕವಾದ ಓದಿಗೆ ಪೂರಕವಾದ ಅಧ್ಯಯನ ಸಾಮಗ್ರಿಗಳು ಹೀಗೆ ಹತ್ತು ಹಲವು ವಿಷಯಗಳನ್ನು ನೀಟ್‌ ರಿಪೀಟರ್ಸ್‌ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ನೀಟ್‌ ಪರೀಕ್ಷೆ ಬರೆದವರಲ್ಲಿ 2ಃ3 ಅನುಪಾತದಲ್ಲಿ ವಿದ್ಯಾರ್ಥಿಗಳು ಮೆಡಿಕಲ್‌ ಕಾಲೇಜುಗಳನ್ನು ಪ್ರವೇಶಿಸುತ್ತಿದ್ದಾರೆ.
ಹಾಸ್ಟೆಲ್‌ ಸೌಲಭ್ಯ: ನೀಟ್‌ ರಿಪೀಟರ್ಸ್‌ ಬ್ಯಾಚ್‌ಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯವೂ ಲಭ್ಯವಿದೆ. ಬೆಂಗಳೂರು, ಮಂಗಳೂರಿನಂತಹ ನಗರ ಪ್ರದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ನೀಟ್‌ ಪರೀಕ್ಷಾ ತರಬೇತಿ ಪುತ್ತೂರಿನ ಅಂಬಿಕಾದಲ್ಲಿ ದೊರಕುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಮೊದಲ ಪ್ರಯತ್ನದಲ್ಲಿ ವೈದ್ಯಕೀಯ ಶಿಕ್ಷಣದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಅಂಬಿಕಾದ ನೀಟ್‌ ರಿಪೀಟರ್ಸ್‌ ಬ್ಯಾಚ್‌ ವರದಾನವಾಗಿ ಪರಿಣಮಿಸಿದೆ.
"

ವಿದ್ಯಾರ್ಥಿಗಳಿಗೆ ಬೇಕಾದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ತೀವ್ರ ನಿಗಾ ಇರಿಸಿ ಆ ವಿದ್ಯಾರ್ಥಿಯು ತನ್ನ ಗುರಿಯನ್ನು ಈಡೇರಿಸಿಕೊಳ್ಳುವಂತೆ ತರಬೇತಿ ನೀಡಲಾಗುತ್ತದೆ. ನಮ್ಮಲ್ಲಿಗೆ ಬಂದ ವಿದ್ಯಾರ್ಥಿಗಳು ನೂರು ಪ್ರತಿಶತ ತಮ್ಮ ಗುರಿಯನ್ನು ಸಾಧಿಸಬೇಕೆಂಬುದೇ ನಮ್ಮ ಕನಸು.

— ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net