ನೀತಿ ಸಂಹಿತೆ ಜೂ.6ರ ತನಕ ಜಾರಿಯಲ್ಲಿರುತ್ತದೆ - ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾಹಿತಿ

Published on

ಪುತ್ತೂರು: ಮತದಾನ ಶಾಂತಿಯುತವಾಗಿ ಶಿಸ್ತು ಬದ್ದವಾಗಿ ನಡೆದಿದ್ದು, ನೀತಿ ಸಂಹಿತೆ ಜೂ.6ರವರೆಗೆ ಜಾರಿಯಲ್ಲಿರಲಿದೆ. ಕಾರ್ಯಕ್ರಮ, ಧಾರ್ಮಿಕ ಆಚರಣೆಗಳಿಗೆ ಇನ್ನು ಅನುಮತಿ ಪಡೆಯುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಾದರೆ ಮಾಹಿತಿ ನೀಡಬೇಕು. ರಾಜಕೀಯ ಚಟುವಟಿಕೆ, ರ‍್ಯಾಲಿಗೆ ಸುವಿಧ ಮೂಲಕ ಪರವಾನಗಿ ಪಡೆಯಬೇಕು. ಕಾನೂನಿನ ಒಳಗೆ ಇರುವ ವಿಚಾರ ಸೇರಿ ಧ್ವನಿವರ್ಧಕ ಪರವಾನಗಿ ಪಡೆಯಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದ್ದಾರೆ.


ಮೇ 7ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಎಫ್. ಎಸ್. ಟಿ ಒಂದು ತಂಡ ಹಾಗೂ ಈಶ್ವರಮಂಗಲ ಚೆಕ್‌ಪೊಸ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಸಾರಡ್ಕ ಹಾಗೂ ಪಾಣಾಜೆ ತಪಾಸಣಾ ಕೇಂದ್ರವನ್ನು ಹಿಂಪಡೆಯಲಾಗಿದೆ. ಮತಗಟ್ಟೆ ಸಂಖ್ಯೆ 60 ಬನ್ನೂರುನಲ್ಲಿ ಶೇ.91.61ಮತ ಚಲಾವಣೆಯಾಗಿ ಮೊದಲ ಸ್ಥಾನದಲ್ಲಿದ್ದರೆ, ಮತಗಟ್ಟೆ ಸಂಖ್ಯೆ 131 ನೆಲ್ಲಿಕಟ್ಟೆ ಪುತ್ತೂರು ಶೇ.66.74ಮತ ಚಲಾವಣೆಯಾಗಿ ಕೊನೆಯ ಸ್ಥಾನದಲ್ಲಿದೆ. ಹಿರಿಯ ನಾಗರಿಕರ ಮತದಾನದಲ್ಲಿ ಸಣ್ಣಪುಟ್ಟ ಗೊಂದಲ ಏರ್ಪಟ್ಟಿದ್ದು, ಮನೆ ಮನೆ ಸರ್ವೆಯ ಸಂದರ್ಭದಲ್ಲಿ ಬಿಟ್ಟುಹೋಗಿದೆ. 12ಡಿ ಮೂಲಕ ಅವಕಾಶ ನೀಡಿದ್ದು, ಕೆಲವರು ಮತಗಟ್ಟೆಗೆ ಬರುವುದಾಗಿ ಹೇಳಿದ್ದಾರೆ. ಬಿಎಲ್‌ಒ ಹಂತದಿAದ ಇಲೆಕ್ಟ್ ವನ್ ಲಾಗಿನ್ ಕೊಟ್ಟಿದ್ದು, ಜಿ.ಪಿ.ಎಸ್. ಮೂಲಕ ಪ್ರಕ್ರಿಯೆ ನಡೆಯುತ್ತದೆ. ಎರಡು ತಿಂಗಳಿAದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಸಿಬ್ಬಂದಿ, ಅಽಕಾರಿಗಳ ಶ್ರಮದಿಂದ ಉತ್ತಮ ರೀತಿಯಲ್ಲಿ ಕೆಲಸಕಾರ್ಯಗಳು ನಡೆಯುತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಹಸೀಲ್ದಾರ್ ಕುಞÂ ಅಹಮ್ಮದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net