ವೈಯಕ್ತಿಕ ಹಿತಾಶಕ್ತಿ ಬದಿಗಿಟ್ಟು ಜನಸೇವೆ

bkl
Published on

ಭಟ್ಕಳ: ಜನಪ್ರತಿನಿಧಿಯಾದವರು ಪ್ರಜೆಗಳ ಸೇವೆ ಮಾಡಬೇಕು. ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಜನಸೇವೆ ಧ್ಯೇಯವಾಗಬೇಕು ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಭಟ್ಕಳದಲ್ಲಿ ಒಂದು ಕೊಟಿ ರೂ. ವೆಚ್ಚದ ನೂತನ ರಸ್ತೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿದ ಬಳಿಕ ರಾಮನಾಥ ಸಭಾಗೃಹದಲ್ಲಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಚಿವ ಮಂಕಾಳ ವೈದ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾರು ಗುರುಗಳಿಗೆ ತಲೆಬಾಗುತ್ತಾರೊ ಅವರು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತಾರೆ. ಗುರುಗಳ ಪಾದ ಸ್ಪರ್ಶ ಆದಲ್ಲಿ ಎಲ್ಲವೂ ಸಾಧ್ಯ. ಮಠ ಮಂದಿರಗಳಿಗೆ ಎಂದು ಕೊರತೆ ಆಗಬಾರದು ಎನ್ನುವುದು ನಮ್ಮ ಬಯಕೆ. ಗುರು ಪರಂಪರೆ ಒಂದಿಗೆ ನಾವು ನಮ್ಮ ಸರ್ಕಾರ ಸದಾ ಇದ್ದೇವೆ ಎಂದರು.

ಹಾಂಗ್ಯೋ ಐಸ್‌ಕ್ರೀಂ ಎಂಡಿ ಪ್ರದೀಪ ಪೈ ಮಾತನಾಡಿದರು. ಬಳಿಕ ಶ್ರೀಗಳು ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಹೆಸ್ಕಾಂ, ಪುರಸಭೆ, ಕೆಇಬಿ ಕಾಂಟೆಕ್ಟರ್‌ಗಳಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಗೌರವಿಸಿದರು.

ಜಿಎಸ್‌ಬಿ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನುಭಾಗ, ಹಾಂಗ್ಯೋ ಐಸ್‌ಕ್ರೀಂನ ದಿನೇಶ ಪೈ, ಉದ್ಯಮಿ ರಾಜೇಶ ನಾಯಕ್, ಜಿಎಸ್‌ಬಿ ಸಮಾಜ ಅಧ್ಯಕ್ಷ ನಾಗೇಶ್ ಕಾಮತ್, ಕಾಮಾಕ್ಷೀ ದೇವಸ್ಥಾನ ಅಧ್ಯಕ್ಷ ಹರೀಶ್ ಕಾಮತ್ ಮೊದಲಾದವರು ಇದ್ದರು.

ಸಚಿವ ವೈದ್ಯರು ತಮ್ಮ ಮಾತಿಗೆ ಬದ್ಧರಾಗಿದ್ದಾರೆ. ಅಧಿಕಾರ ಇಲ್ಲದಾಗಲೂ ಅವರು ಹೇಳಿದ ಕಾರ್ಯ ಮಾಡಿಕೊಟ್ಟಿದ್ದಾರೆ. ಒಂದು ಕೋಟಿ ರೂ. ವೆಚ್ಚದಲ್ಲಿ ಶ್ರೀಗಳು ಮೊಕ್ಕಾಂಗೆ ಬರುವ ಮೊದಲೇ ರಸ್ತೆ ನಿರ್ಮಿಸಿ ಕೊಟ್ಟರುವುದಕ್ಕೆ ಜಿಎಸ್‌ಬಿ ಸಮಾಜ ಹಾಗೂ ಸಾರ್ವಜನಿಕರ ಪರವಾಗಿ ಅಭಿನಂದನೆಗಳು. -ಪ್ರದೀಪ ಪೈ ಹಾಂಗ್ಯೋ ಐಸ್‌ಕ್ರೀಂ ಎಂಡಿ https://www.vijayavani.net/inaugurating-the-tuition-class https://www.vijayavani.net/good-relationship-with-creativity-in-children

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net