ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ PUTTILA

ಪುರುಷರಕಟ್ಟೆ-ಶಾಂತಿಗೋಡು ರಸ್ತೆಯ ಮಾಯಂಗಲದಿಂದ ಕೂಡುರಸ್ತೆಯವರೆಗಿನ ರಸ್ತೆಯನ್ನು ಸಂಚಾರ ಯೋಗ್ಯಗೊಳಿಸುವಂತೆ ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಮಾಯಂಗಲದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು.
ಪುರುಷರಕಟ್ಟೆ-ಶಾಂತಿಗೋಡು ರಸ್ತೆಯ ಮಾಯಂಗಲದಿಂದ ಕೂಡುರಸ್ತೆಯವರೆಗಿನ ರಸ್ತೆಯನ್ನು ಸಂಚಾರ ಯೋಗ್ಯಗೊಳಿಸುವಂತೆ ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಮಾಯಂಗಲದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒ ವಿರುದ್ಧ ಪುತ್ತಿಲ ಆಕ್ರೋಶ
ಪುತ್ತೂರು: ಪುರುಷರಕಟ್ಟೆ-ಶಾಂತಿಗೋಡು ರಸ್ತೆಯ ಮಾಯಂಗಲದಿಂದ ಕೂಡುರಸ್ತೆಯವರೆ ಸಂಚಾರ ಯೋಗ್ಯಗೊಳಿಸುವಂತೆ ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಮಾಯಂಗಲದಲ್ಲಿ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು. ನರಿಮೊಗರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಗಮಿಸಿ ೨ ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಊರಿನ ಜನರನ್ನು ಮಂಗ ಮಾಡುವ ಅಧಿಕಾರಿಗಳು ಗ್ರಾಮದಲ್ಲಿ ಇರಬಾರದು. ಅಧಿಕಾರಿ ಹೇಗೆ ಕರ್ತವ್ಯ ನಿರ್ವಹಿಸಬೇಕೆಂಬ ಕನಿಷ್ಠ ಜ್ಞಾನ ಪಿಡಿಒ ಅವರಿಗೆ ಇರಬೇಕಿತ್ತು. ಪಿಡಿಒ ಕರೆ ಸ್ವೀಕರಿಸದೆ ಉದ್ಧಟತನ ತೋರಿಸಿದ್ದಾರೆ. ಯಾರದ್ದೋ ಒತ್ತಡಕ್ಕೆ ಸಿಲುಕಿದ ರೀತಿಯನ್ನು ತೋರ್ಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ದುರಂತವಾಗಿದೆ. ಅನುದಾನ ನಾವು ಯಾವುದೇ ತರವಾಡು ಮನೆಗೆ ಕೇಳುವುದಲ್ಲ. ಸಾರ್ವಜನಿಕರ ಕೆಲಸಗಳಿಗೆ ಸರ್ಕಾರದ ಅನುದಾನ ಕೇಳಿದ್ದು ವೈಯುಕ್ತಿಕ ದೇಣಿಗೆಯಲ್ಲ ಎಂದರು.
ಪ್ರಮುಖರಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ, ಶ್ರೀರಾಮ ಪಾತಾಳ, ಮಹೇಂದ್ರ ಬಜತ್ತೂರು, ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ರಸ್ತೆ ದುರಸ್ತಿಗೆ ಡಬ್ಬಿ ಇಡುತ್ತೇವೆ

ಅರುಣ್ ಕುಮಾರ್ ಪುತ್ತಿಲ ಪಿಡಿಒ ಅವರಿಗೆ ಕಾಲ್ ಮಾಡಿದರೂ, ಅವರು ಕಾಲ್ ರಿಸೀವ್ ಮಾಡಲಿಲ್ಲ. ಸಾರ್ವಜನಿಕರ ಸಮಸ್ಯೆಗೆ ಅವರು ಸ್ಪಂದನೆ ಕೊಡಬೇಕು. ರಸ್ತೆ ದುರಸ್ತಿಗೆ ಸರ್ಕಾರದಲ್ಲಿ ಹಣವಿಲ್ಲವಾದರೆ, ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿ. ರಸ್ತೆ ದುರಸ್ತಿಗೆ ಡಬ್ಬಿ ಇಟ್ಟು ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ ನಾವು ರಸ್ತೆ ದುರಸ್ಥಿ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net