ಪುತ್ತಿಲ ಪರಿವಾರದ ನಗರ ಮತ್ತು ಗ್ರಾಮಾಂತರದ ಬೂತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಸಮಾಗಮ ಕಾರ್ಯಕ್ರಮ

IMG-20230820-WA0012
Published on

ಪುತ್ತೂರು: ಪುತ್ತೂರು ಕೋಟೆಚಾ ಹಾಲ್ ನಲ್ಲಿ ಪುತ್ತಿಲ ಪರಿವಾರದ ನಗರ ಮತ್ತು ಗ್ರಾಮಾಂತರದ ಬೂತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಸಮಾಗಮ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಬಿ. ವಿ. ಸೂರ್ಯನಾರಾಯಣ ಉದ್ಘಾಟಿಸಿದರು.

ದೇಶ ಸೇವೆಯ ಸಂದರ್ಭ ಅಪಘಾತದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಜಲಿ ಸಲ್ಲಿಸಲಾಯಿತು. ವಿವಿಧ ಗ್ರಾಮದ ಪುತ್ತಿಲ ಪರಿವಾರದಿಂದ ಕೈಗೊಂಡ ಸಾಮಾಜಿಕ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಧಾರ್ಮಿಕ ಚಿಂತಕ ಶ್ರೀಕೃಷ್ಣ ಉಪಾಧ್ಯಾಯ, ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ ಪುತ್ತಿಲ, ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಗೌರವ ಸಲಹೆಗಾರ ಸುನಿಲ್ ಬೋರ್ಕರ್, ಭೀಮ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಶರಣ್ಯ, ಶ್ರಾವ್ಯ ಪ್ರಾರ್ಥಿಸಿದರು. ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿ ಕುಮಾರ್ ಮಠ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಪ್ರಸ್ತಾವನೆಗೈದರು. ನಗರ ಅಧ್ಯಕ್ಷ ಅನಿಲ್ ತೆಂಕಿಲ ವಂದಿಸಿದರು. ಮಾಧ್ಯಮ ವಕ್ತಾರ ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net