ಲೋಕಸಭಾ ಚುನಾವಣೆಗೆ ಪುತ್ತಿಲ ಸ್ಪರ್ಧೆ

20240229_121702
Published on

ಪುತ್ತೂರು: ಸಾಮಾಜಿಕ ಚಟುವಟಿಕೆಯ ಜತೆಗೆ ರಾಜಕೀಯ ಕ್ಷೇತ್ರಕ್ಕೆ ಪುತ್ತಿಲ ಪರಿವಾರ ಕಾಲಿಡಲಿದೆ. ವಿಧಾನ ಸಭಾ ಕ್ಷೇತ್ರದಿಂದ ರಾಜ್ಯ ಮಟ್ಟಕ್ಕೆ ವಿಸ್ತರಣೆಯಾಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ  ಅರುಣ್ ಪುತ್ತಿಲ ಸ್ಪರ್ಧಿಸಲಿದ್ದಾರೆಂದು ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ ಘೋಷಿಸಿದ್ದಾರೆ.

ಪುತ್ತೂರಿನ‌ ಪುತ್ತಿಲ ಪರಿವಾರದ ಕಛೇರಿಯಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಸಂಘಟನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ ನಡೆಯಲಿರುವ
ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಲಿದೆ. ಸೇವಾಕಾರ್ಯದ ಜತೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರ್ಯವನ್ನು ಪುತ್ತಿಲ ಪರಿವಾರ ಮಾಡುವ ಮೂಲಕ ಕಾರ್ಯಕರ್ತರ ಹಾಗೂ ಮತದಾರರ ಕೈ ಬಲಪಡಿಸುವ ಕಾರ್ಯ ಮಾಡಲಿದೆ ಎಂದರು.

ಮಾರ್ಚ್ 3ರಂದು ಪುತ್ತಿಲ ಪರಿವಾರದದಿಮದ ಅಂಬ್ಯುಲೆನ್ಸ್  ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಉಮೇಶ್ ಕೋಡಿಬೈಲ್, ವಕ್ತಾರ ಕೃಷ್ಣ ಉಪಾದ್ಯಯ, ಪ್ರಮುಖರಾದ ಅನಿಲಗ ತೆಂಕಿಲ, ಮಹೇಂದ್ರ ವರ್ಮ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net