ಹಿಂದು ನಾಯಕರ ಮೇಲೆಯೇ ಸರ್ಕಾರದ ಕಣ್ಣು -  ಖಂಡನಾ ಸಭೆಯಲ್ಲಿ ಗಣರಾಜ ಭಟ್ ಕೆದಿಲ ಆರೋಪ

PTR_4 JUN_1
Published on

ಪುತ್ತೂರು: ಹಿಂದು ನಾಯಕರ ಮೇಲೆಯೇ ಸರ್ಕಾರಕ್ಕೆ ಕಣ್ಣು ಬಿದಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ವಿನಾಶ ಕಾಲ ಬಂದಿದೆ. ಹಿಂದು ಕಾರ್ತಕರ್ತರ ಗಡಿಪಾರು ಎಂಬುದು ಸರ್ಕಾರಕ್ಕೆ ಕೊನೆಯ ಮೊಳೆ ಹೊಡೆಯುವ ದಿನವಾಗಿದೆ ಎಂದು ವಾಗ್ಮಿ ಗಣರಾಜ ಭಟ್ ಕೆದಿಲ ಹೇಳಿದರು.

ಮುಕ್ರಂಪಾಡಿಯಲ್ಲಿ ಹಿಂದು ನಾಯಕರ ಗಡಿಪಾರು ನೋಟಿಸ್, ಸಂಘಟನೆಯ ಪ್ರಮುಖರ ಮನೆಗೆ ರಾತೋರಾತ್ರಿ ತೆರಳಿರುವುದನ್ನು ಖಂಡಿಸಿ ನಡೆದ ಸಭೆಯಲ್ಲಿ ಮಾತನಾಡಿದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಪುತ್ತಿಲ ಪರಿವಾರ ಟ್ರಸ್ಟ್ ಗೌರವ ಸಲಹೆಗಾರ ಚಂದಪ್ಪ ಮೂಲ್ಯ, ಕೋಶಾಽಕಾರಿ ಗಣೇಶ್ ಮಕರಂದ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ವಕೀಲ ಚಿನ್ಮಯ ರೈ ಉಪಸ್ಥಿತರಿದ್ದರು.

ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರವಿ ರೈ ಮಠ ವಂದಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.

ಹಿಂದು ಕಾರ್ಯಕರ್ತರನ್ನು ದಮನಿಸುವ ಕಾರ್ಯ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ. ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಮುಂದಿನ ದಿನ ಧರ್ಮ ಆಧಾರಿತ ರಾಜಕಾರಣಕ್ಕಾಗಿ ಬಿಜೆಪಿಯನ್ನು ಮತ್ತೆ ಶಕ್ತಿಗೊಳಿಸಬೇಕು. ಅಽಕಾರದ ಅಮಲಿನಲ್ಲಿ ಕಾರ್ಯಕರ್ತರ ಮೇಲೆ ದಾಳಿ ಮಾಡುವ ಕೆಲಸ ಕಾರ್ಯ ಸರ್ಕಾರದ ಕಡೆಯಿಂದ ಆಗುತ್ತದೆ. ಇದೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ, ಹಿಂದು ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ.

| ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸಂಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net