ಏ.5ಕ್ಕೆ ಪುತ್ತಿಗೆ ವಿದ್ಯಾಪಿಠದ 40ನೇ ವಾರ್ಷಿಕೋತ್ಸವ

AKB_8902
Published on

ಉಡುಪಿ: ಹಿರಿಯಡ್ಕ ಸ್ವರ್ಣಾ ನದಿ ತಟದಲ್ಲಿರುವ ಪುತ್ತಿಗೆ ವಿದ್ಯಾಪಿಠದ 40ನೇ ವಾರ್ಷಿಕೋತ್ಸವ ಮತ್ತು ಪುತ್ತಿಗೆ ಸುಗುಣ ಸ್ಕೂಲ್​ನ ಪ್ರಥಮ ವಾರ್ಷಿಕೋತ್ಸವ ಏ.5ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತಿರ್ಥ ಶ್ರೀಪಾದರು ಹಾಗೂ ಕಿರಿಯಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 6-.30ಕ್ಕೆ ಪುತ್ತಿಗೆ ಹಿರಿಯ ಶ್ರೀಪಾದರ ಪೀಠಾರೋಹಣ ಸುವರ್ಣ ಮಹೋತ್ಸವದ ನಿಮಿತ್ತ ಪುತ್ತಿಗೆ ವಿದ್ಯಾಪಿಠದ ಹಳೆವಿದ್ಯಾರ್ಥಿಗಳಿಂದ 51 ಕುಂಡಗಳಲ್ಲಿ ವ್ಯಾಸ ಯಾಗ, 10 ಗಂಟೆಗೆ ವಿಪ್ರ ಮಕ್ಕಳಲ್ಲಿ ಧರ್ಮ ಶ್ರದ್ಧೆಯ ಪ್ರವರ್ಧನೆ ಹೇಗೆ ಎಂಬ ವಿಷಯದಲ್ಲಿ ವಿಚಾರಗೋಷ್ಠಿ, 11 ಗಂಟೆಗೆ ವಿದ್ಯಾಪಿಠದ 40ನೇ ವಾರ್ಷಿಕೋತ್ಸವ ಸಮಾರಂಭ, ಮಧ್ಯಾಹ್ನ 2ಕ್ಕೆ ಕರಾವಳಿ ಸಂಸತ ಪ್ರತಿಭಾ ಪ್ರದರ್ಶನ, ಸಾಯಂಕಾಲ 4ಗಂಟೆಗೆ ಮಕ್ಕಳಲ್ಲಿ ಸಂಸತ ಮತ್ತು ಸಂಸತಿ ಜಾಗೃತಿ ಬಗ್ಗೆ ಚಿಂತನ&ಮಂಥನ, 5 ರಿಂದ 7-ರವರೆಗೆ ಶ್ರೀ ಪುತ್ತಿಗೆ ಸುಗುಣ ಸ್ಕೂಲ್​ ಪ್ರಥಮ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಮತ್ತು ಚಿಣ್ಣರಿಂದ ವೈವಿಧ್ಯ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸರ್ಕಾರದ ವಿಶೇಷ ಪ್ರೋತ್ಸಾಹ ಅಗತ್ಯ

ವಿದ್ಯಾಪಿಠದಲ್ಲಿ ಈವರೆಗೆ ನೂರಾರು ವಿದ್ಯಾರ್ಥಿಗಳು ವೇದ, ವೇದಾಂತ, ಜ್ಯೋತಿಷ, ಪೌರೋಹಿತ್ಯ, ಆಗಮಾದಿ ಶಾಸ್ತ್ರಗಳನ್ನು ಅಧ್ಯಯನ ನಡೆಸಿ ದೇಶ&ವಿದೇಶಗಳಲ್ಲಿ ಧರ್ಮಪ್ರಸಾರದ ಕಾರ್ಯದಲ್ಲಿ ತೊಡಗಿದ್ದಾರೆ. ಕಲ್ಕತ್ತಾ, ಬೆಂಗಳೂರು, ಚೆನ್ನೆ$, ಪಾಡಿಗಾರು, ಪುತ್ತಿಗೆಯಲ್ಲಿ ಪ್ರಾಚಿನ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ವಿದ್ಯಾಪಿಠಗಳ ಅಸ್ಮಿತೆಯನ್ನು ಉಳಿಸಿ&ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಪ್ರೋತ್ಸಾಹ ಬೇಕು ಎಂದು ಶ್ರೀಗಳು ಹೇಳಿದರು.

ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್​ ಭಟ್​, ಸುನೀಲ್​ ಆಚಾರ್ಯ, ಪ್ರಮೋದ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net