

ಹುಬ್ಬಳ್ಳಿ: ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಪರ್ಯಾಯ ಪೂರ್ವ ಸಂಚಾರ ಕೈಗೊಂಡಿದ್ದು, ಡಿ. 29ರಂದು ಸಂಜೆ 5ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ.
ಪುತ್ತಿಗೆ ಶ್ರೀಗಳೊಂದಿಗೆ ಕಿರಿಯಪೀಠ ಸುಶೀಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ ಪಟ್ಟದ ದೇವರೊಂದಿಗೆ ಆಗಮಿಸಲಿರುವ ಉಭಯ ಶ್ರೀಗಳನ್ನು ಇಲ್ಲಿಯ ದೇಶಪಾಂಡೆನಗರದ ಬಾಳಿಗಾ ಕ್ರಾಸ್ನಿಂದ ಮೆರವಣಿಗೆ ಮೂಲಕ ಅದ್ದೂರಿಯಾಗಿ ಕೃಷ್ಣಮಠಕ್ಕೆ ಸ್ವಾಗತಿಸಲಾಗುತ್ತಿದೆ. ನಂತರ ಕೃಷ್ಣ ಮಂದಿರದಲ್ಲಿ ಸಂಜೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿ. 31ರಂದು ಕೃಷ್ಣ ಮಠದಲ್ಲಿ ಪಟ್ಟದ ದೇವರ ಪೂಜಾ ಕಾರ್ಯಕ್ರಮ, ಉಭಯ ಶ್ರೀಗಳವರಿಗೆ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಪಾದಪೂಜೆ ಭಿಕ್ಷೆ, ಕಾಣಿಕೆ, ಸಮರ್ಪಣೆ ಮಾಡಲಾಗುತ್ತಿದೆ.
ಭಕ್ತರು, ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಹಾಗೂ ಕಾರ್ಯದರ್ಶಿ ವಾದಿರಾಜ ಭಟ್ ಇವರು ಕೋರಿದ್ದಾರೆ.