

ಉಡುಪಿ: ಮರೆತು ಹೋಗಿರುವ ನೈಜ ಅಧ್ಯಾತ್ಮವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಸ್ವಾರ್ಥ ಚಿಂತನೆಯಿಂದ ಕ್ಷಾತ್ರಗುಣ ಮರೆತ ಕಾರಣ ಭಾರತ ಪರಕೀಯರ ದಾಳಿಗೆ ಒಳಗಾಗಬೇಕಾಯಿತು ಎಂದು ವಾಗ್ಮಿ ಲಕ್ಷ್ಮಿ ರಾಜ್ಕುಮಾರ್ ಹೇಳಿದರು.
ಪುತ್ತಿಗೆ ಪರ್ಯಾಯೋತ್ಸವ ಸಾಂಸತಿಕ ಕಾರ್ಯಕ್ರಮ ಅಂಗವಾಗಿ ಗುರುವಾರ ಅನಂದ ತೀರ್ಥ ಮಂಟಪದಲ್ಲಿ ಕ್ಷಾತ್ರ ಮತ್ತು ಅಧ್ಯಾತ್ಮ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ಕ್ಷಾತ್ರಕ್ಕೆ ಮೋಹವಿಲ್ಲದ ಆಧ್ಯಾತ್ಮ ಬಲ ಬೇಕು. ಭಗವದ್ಗೀತೆ ಇದಕ್ಕೆ ಪೂರಕವಾಗಿದೆ. ಕೃಷ್ಣನ ಮಾತಿನಂತೆ ತುಚ್ಛವಾದ ಹೃದಯ ದೌರ್ಬಲ್ಯ ದೇಶವನ್ನು ದಾಸ್ಯಕ್ಕೆ ತಳ್ಳುತ್ತಿದೆ. ನಮ್ಮ ಅನೇಕ ತಲೆಮಾರು ಗೀತೆಯ ಮೂಲ ಸತ್ವದ ಅರಿವೇ ಇಲ್ಲದಂತೆ ವಿಸ್ಮ$ತಿಯಲ್ಲಿ ಬದುಕುತ್ತಿದೆ. ಬದುಕಿನ ನಿರ್ಧಾರಗಳಲ್ಲಿ ಗೀತೆಯ ಸಾರ ಪ್ರತಿಲಗೊಳ್ಳದಿದ್ದರೆ ಪ್ರಾಚಿನ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇಂದಿನ ಶಿಕ್ಷಣ ಹಣ ಗಳಿಕೆಗೆ ಮಾತ್ರ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಪ್ರಸಕ್ತ ಕಾಲಟ್ಟದಲ್ಲಿ ಪ್ರತಿಯೊಬ್ಬರಲ್ಲೂ 4 ವರ್ಣಗಳು ಇರಬೇಕು. ಸುಖಕರ ಜೀವನದ ಚಿಂತನೆಗಳಿಂದ ಮೌಲ್ಯಗಳು ನಶಿಸುತ್ತಿವೆ. ವೈಶ್ವಿಕ ಯೋಚನೆಗಳ ಮೂಲಕ ಸಮಾಜಕ್ಕೆ ಕೊಡುಗೆ ಸಲ್ಲಿಸಬೇಕು ಎಂದು ಹೇಳಿದರು.