ವೇದಾಂತ ಪ್ರಪಂಚಕ್ಕೆ ವ್ಯಾಸರಾಜರ ಕೊಡುಗೆ ಅಪಾರ: ಪುತ್ತಿಗೆ ಶ್ರೀ

IMG-20240611-WA0007
Published on

ಉಡುಪಿ: ಮಹಾಮಹಿಮರಾದ ಶ್ರೀವ್ಯಾಸರಾಜರು ವೇದಾಂತ ಪ್ರಪಂಚಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ.

ಅವರು ರಚಿಸಿದ ನ್ಯಾಯಾಮೃತ-ಚಂದ್ರಿಕಾ-ತರ್ಕತಾಂಡವ ಗ್ರಂಥಗಳು ನರಸಿಂಹ ದೇವರ ಮೂರು ಕಣ್ಣಿನಂತೆ ಕಂಗೊಳಿಸುತ್ತಿವೆ. ಸಂಸ್ಕತ -ಮತ್ತು ಕನ್ನಡ ವಾಙ್ಮಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂಥಹ ಯತಿವರೇಣ್ಯರ ಗ್ರಂಥಗಳನ್ನು ಅಧ್ಯಯನ ಮಾಡುವುದು ಸುಕೃತದ ಫಲವಾಗಿದೆ ಎಂದು ಪರ್ಯಾಯ ಪೀಠಾಧಿಪತಿlzp ಶ್ರೀ ಸುಗುಣೇಂದ್ರ ತೀರ್ಥ ಶ್ರೀ0ಪಾದರು ತಿಳಿಸಿದರು.

ಮಂಗಳವಾರ ಶ್ರೀಕೃಷ್ಣನ ಸನ್ನಿಧಿಯಲ್ಲಿ ನ್ಯಾಯಾಮೃತ ಗ್ರಂಥದ ಪಾಠದ ಮಂಗಳೋತ್ಸವದಲ್ಲಿ ಅನುಗ್ರಹ ಸಂದೇಶ ನೀಡಿದರು.

ನ್ಯಾಯಾಮೃತ ಪಾಠ ಹೇಳಿದ ಬೆಂಗಳೂರಿನ ಪ್ರಸಿದ್ಧ ವಿದ್ವಾಂಸ ಡಾ. ಎನ್​.ವೆಂಕಟೇಶಾಚಾರ್ಯ ಅವರನ್ನು ಶ್ರೀಗಳು ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು. ಪಾಠ ಕೇಳಿದ ಶಿಷ್ಯರು ಸುವರ್ಣಕೃಷ್ಣ ಪ್ರತಿಮೆಯನ್ನು ನೀಡಿ ಸನ್ಮಾನಿಸಿದರು.

ಉಡುಪಿ ಸಂಸತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್​ ಸತ್ಯನಾರಾಯಣ ಆಚಾರ್ಯ, ಡಾ.ಬಿ.ಗೋಪಾಲಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net