ಕೃಷ್ಣನಿಗೆ ಸುವರ್ಣ ರಥ ಸಮರ್ಪಣೆ: ಪುತ್ತಿಗೆ ಶ್ರೀ

udp-14-puttige
Published on

ಉಡುಪಿ: ಸುವರ್ಣ ಸಂನ್ಯಾಸ ಸ್ಮರಣೆಗಾಗಿ ಕೃಷ್ಣನಿಗೆ ನಮ್ಮ ಪರ್ಯಾಯದಲ್ಲಿ ಬಂಗಾರದ ರಥ ಸಮರ್ಪಿಸಲು ಉದ್ದೇಶಿಸಲಾಗಿದೆ. ಗುರುಗಳಾದ ವಿದ್ಯಾಮಾನ್ಯ ತೀರ್ಥರು ಸಮರ್ಪಿಸಿದ ಚಿನ್ನದ ರಥ ರಥಬೀದಿಯಲ್ಲಿ ಸಾಗಿದರೆ ಪಾರ್ಥ ಸಾರಥಿ ರಥ ಕೃಷ್ಣ ಮಠದೊಳಗೆ ಸಂಚರಿಸಲಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ರಥಬೀದಿ ಪುತ್ತಿಗೆ ಮಠದಲ್ಲಿ ಪರ್ಯಾಯ ಪೂರ್ವಭಾವಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮುಂದಿನ ಪರ್ಯಾಯ ವಿಶ್ವ ಗೀತಾ ಪರ್ಯಾಯ. ಜಗತ್ತಿನಾದ್ಯಂತ ಭಕ್ತರು ಭಗವದ್ಗೀತೆ ಬರೆದು ಕೃಷ್ಣನಿಗೆ ಸಮರ್ಪಣೆ ಮಾಡಲಿದ್ದಾರೆ. ಉಡುಪಿ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪರ್ಯಾಯ ಸಂದರ್ಭದಲ್ಲಿ ಬರುವ ಭಕ್ತರಿಗೆ ಸೂಕ್ತವ್ಯವಸ್ಥೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಜನರು ಧಾರ್ಮಿಕತೆಯಿಂದ ವಿಮುಖರಾಗುತ್ತಿರುವುದು ಎಲ್ಲಾ ಅನಾಹುತಗಳಿಗೆ ಮುಖ್ಯ ಕಾರಣ. ಅರ್ಥಿಕ ಜಾಗತೀಕರಣ ಜೊತೆಗೆ ಪಾರಮಾರ್ಥಿಕ ಜಾಗತೀಕರಣ ನಡೆಯಬೇಕು. ಎಲ್ಲರೂ ಆಧ್ಯಾತ್ಮದ ಹಾದಿಯಲ್ಲಿ ಬಂದರೆ ವಿಶ್ವದಲ್ಲಿ ಶಾಂತಿ ಮತ್ತು ಸುಖ ನೆಲಸಲಿದೆ ಎಂದರು.

ಪಂಚ ಪ್ರಧಾನ ಯೋಜನೆ
ಕೃಷ್ಣನಿಗೆ ಕೋಟಿ ಗೀತಾ ಲೇಖನ ಸರ್ಮಣೆ, ಕಲ್ಸಂಕದಲ್ಲಿ ಕೃಷ್ಣನನ್ನು ಹಿಡಿದಿರುವ ಮಧ್ವಾಚಾರ್ಯ ಪ್ರತಿಮೆ ಸಹಿತ ಸ್ವಾಗತಗೋಪುರ ನಿರ್ಮಾಣ, ಅಂತಾರಾಷ್ಟಿçಯ ಭಗವದ್ಗೀತಾ ಸಮ್ಮೇಳನ, ಪ್ರತಿನಿತ್ಯ ಸೂರ್ಯೋದಯದಿಂದ ಅಸ್ತದವರೆಗೆ ಗೀತಾ ಪಾರಾಯಣ, 200 ಕೊಠಡಿಗಳ ವಸತಿಗೃಹ ನಿರ್ಮಾಣ ಸಹಿತ ಪಂಚ ಪ್ರಧಾನ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಶ್ರೀಗಳು ಹೇಳಿದರು.

ಕಟೀಲು ಲಕ್ಷಿö್ಮÃನಾರಾಯಣ ಅಸ್ರಣ್ಣ , ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಾಜಿ ಶಾಸಕ ರಘುಪತಿ ಭಟ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳವು ಉಪಸ್ಥಿತರಿದ್ದರು. ಪ್ರಸನ್ನ ಆಚಾರ್ಯ ಸ್ವಾಗತಿಸಿ, ಗೋಪಾಲಾಚಾರ್ಯ ಪ್ರಸ್ತಾವನೆ ಮಾಡಿದರು. ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿ, ನಾಗರಾಜ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net