ಪುತ್ತಿಗೆ ಪರ್ಯಾಯ ಕಟ್ಟಿಗೆ ಮುಹೂರ್ತ ಸಂಪನ್ನ

IMG-20230626-WA0007
Published on

ಉಡುಪಿ : ಪರ್ಯಾಯ ಪೂರ್ವ ವಿಧಿಗಳಲ್ಲಿ ಮೂರನೆಯದಾದ ಕಟ್ಟಿಗೆ ಮುಹೂರ್ತ ಸೋಮವಾರ ಪುತ್ತಿಗೆ ಮಠದಲ್ಲಿ ಸಂಪನ್ನಗೊಂಡಿತು.

ಶ್ರೀಕೃಷ್ಣ ಮಠದ ಕಟ್ಟಿಗೆ ರಥವಿರುವ ಸ್ಥಳದಲ್ಲಿ ಬೆಳಿಗ್ಗೆ ೯.೫೦ರ ಸಿಂಹಲಗ್ನ ಸುಮುಹೂರ್ತದಲ್ಲಿ ಕಟ್ಟಿಗೆ ಸಂಗ್ರಹಿಸುವ ಸಂಪ್ರದಾಯದೊAದಿಗೆ ಕಟ್ಟಿಗೆ ಮುಹೂರ್ತ ನಡೆಯಿತು.

ಹೆರ್ಗ ವೇದವ್ಯಾಸ ಭಟ್ ಹಾಗೂ ರಾಘವೇಂದ್ರ ಕೊಡಂಚ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಪುತ್ತಿಗೆ ಮಠದ ಪಟ್ಟದ ದೇವರಾದ ಶ್ರೀ ಉಪೇಂದ್ರ ವಿಠಲ ಸನ್ನಿಧಿಯಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥನೆ, ಬಳಿಕ ಚಂದ್ರಮೌಳೀಶ್ವರ, ಅನಂತೇಶ್ವರ ಹಾಗೂ ಶ್ರೀಕೃಷ್ಣ ಮಠದಲ್ಲಿ ಪ್ರಾರ್ಥನೆ ನಡೆಸಲಾಯಿತು.
ಮರಳಿ ಶ್ರೀಮಠಕ್ಕೆ ಆಗಮಿಸಿ, ಮೆರವಣಿಗೆ ಮೂಲಕ ಕಟ್ಟಿಗೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮಧ್ವಸರೋವರ ಬಳಿಯ ಕಟ್ಟಿಗೆರಥ ಸಮೀಪ ತೆರಳಲಾಯಿತು. ಪೂಜೆ ನಡೆಸಿ, ಶ್ರೀಮಠದ ವಿದ್ವಾಂಸರು ಹಾಗೂ ಅಷ್ಟಮಠಗಳ ವಿದ್ವಾಂಸರಿಗೆ ನವಗ್ರಹದಾನ ಪ್ರದಾನ ಮಾಡಲಾಯಿತು. ಬಳಿಕ ಶ್ರೀಕೃಷ್ಣ ಮಠದ ಪದ್ಮನಾಭ ಮೇಸ್ತಿç ನೇತೃತ್ವದಲ್ಲಿ ಕಟ್ಟಿಗೆ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಆನೆಗುಡ್ಡೆ ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಶ್ರೀಧರ ಉಪಾಧ್ಯಾಯ, ಕೇಂಜ ಶ್ರೀಧರ ತಂತ್ರಿ, ಬಿ. ಗೋಪಾಲಾಚಾರ್ಯ, ಉಡುಪಿ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ವಿವಿಧ ಸಂಘಸAಸ್ಥೆಗಳ ಪದಾಧಿಕಾರಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಶ್ರೀಮಠದ ದಿವಾನರಾದ ಮುರಳೀಧರ ಆಚಾರ್ಯ, ನಾಗರಾಜ ಆಚಾರ್ಯ, ಶ್ರೀಮಠದ ಆಡಳಿತಾಧಿಕಾರಿ ಪ್ರಸನ್ನಾಚಾರ್ಯ, ಮಹಿತೋಷ ಆಚರ‍್ಯ,
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ಬಿಜೆಪಿ ಕೋಶಾಧಿಕಾರಿ ಪ್ರವೀಣ ಶೆಟ್ಟಿ ಕಪ್ಪೆಟ್ಟು, ಉದ್ಯಮಿ ನಾಗೇಶ ಹೆಗ್ಡೆ, ಈಶ್ವರ ಶೆಟ್ಟಿ ಚಿಟ್ಪಾಡಿ, ಬಾಲಗಂಗಾಧರರಾವ್ ಉಪಸ್ಥಿತರಿದ್ದರು.

ಹಲಸಿನ ಸಸಿ ವಿತರಣೆ
ಕಟ್ಟಿಗೆ ಮುಹೂರ್ತ ಸಂದರ್ಭದಲ್ಲಿ ಆಗಮಿಸಿದ ಗಣ್ಯರು ಹಾಗೂ ವಿವಿಧ ಸಂಘಸAಸ್ಥೆಗಳ ಪ್ರಮುಖರಿಗೆ ಸಿದ್ದುಹಲಸು ತಳಿಯ ೧೦೮ ಹಲಸಿನ ಸಸಿಗಳನ್ನು ವಿತರಿಸಲಾಯಿತು.

ಏನಿದು ಕಟ್ಟಿಗೆ ಮುಹೂರ್ತ
ಉಡುಪಿ ಶ್ರೀಕೃಷ್ಣ ಅನ್ನಬ್ರಹ್ಮ ಎಂದೇ ಖ್ಯಾತಿ. ಆಗಮಿಸಿದ ಭಕ್ತರಿಗೆ ನಿತ್ಯಾನ್ನಸಂತರ್ಪಣೆ ಲಾಗಾಯ್ತಿನಿಂದ ನಡೆದುಬಂದ ಕ್ರಮ. ಪ್ರತೀ ರ‍್ಯಾಯ ಸಂದರ್ಭದಲ್ಲಿಯೂ ದೇವರಿಗೆ ನಿತ್ಯ ನೈವೇದ್ಯ ಸಮರ್ಪಣೆ ಹಾಗೂ  ಆಗಮಿಸುವ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆಗೆ ಪೂರಕವಾಗಿ ಕೆಲವು ರ‍್ಯಾಯಪೂರ್ವ ವಿಧಿಗಳನ್ನು ಶ್ರೀ ವಾದಿರಾಜ ಯತಿಗಳು ವಿಧಿಸಿದ್ದು, ಕಟ್ಟಿಗೆ ಮುಹೂರ್ತ ರ‍್ಯಾಯ ಪೂರ್ವದಲ್ಲಿ ನಡೆಯುವ ಮೂರನೇ ಮುಹೂರ್ತ. ಈಗಾಗಲೇ ಬಾಳೆಗಿಡ ನೆಟ್ಟು ಪೋಷಿಸುವ ಬಾಳೆ ಮುಹೂರ್ತ, ಅಕ್ಕಿ ಸಂಗ್ರಹಣೆಯ ಅಕ್ಕಿ ಮುಹೂರ್ತ ನಡೆಸಲಾಗಿದೆ. ಉರುವಲು ಸಂಗ್ರಹದ ಕಟ್ಟಿಗೆ ಮುಹೂರ್ತ ಮೂರನೆಯದು. ಕೃಷ್ಣಮಠದಲ್ಲಿ ದೇವರ ನೈವೇದ್ಯವನ್ನು ಕಟ್ಟಿಗೆ ಒಲೆಯಲ್ಲಿಯೇ ಸಿದ್ಧಪಡಿಸಲಾಗುತ್ತದೆ ಎಂಬುದು ವಿಶೇಷ. ವರ್ಷಕ್ಕೆ ಸುಮಾರು ೨೦ ಲೋಡು ಕಟ್ಟಿಗೆಯ ಅಗತ್ಯ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net