ಪುತ್ಥಳಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

10 vikram 1
Published on

ವಿಜಯವಾಣಿ ಸುದ್ದಿಜಾಜ ಧಾರವಾಡ
ನಗರದಲ್ಲಿ ಸ್ಥಾಪಿಸಿರುವ ಸಾಹಿತಿ ಪ್ರೊ. ಕೆ.ಜಿ. ಕುಂದಣಗಾರ ಪುತ್ಥಳಿ, ಸುತ್ತಲಿನ ಆವರಣ ಅಭಿವೃದ್ಧಿ ಕಾಮಗಾರಿಗೆ ಮೇಯರ್​ ರಾಮಣ್ಣ ಬಡಿಗೇರ ಮಂಗಳವಾರ ಚಾಲನೆ ನೀಡಿದರು.
ಕಾಲೇಜು ರಸ್ತೆಯಲ್ಲಿ ಈ ಮೊದಲಿದ್ದ ಕುಂದಾಣಗಾರ ಪುತ್ಥಳಿಯನ್ನು ರಸ್ತೆ ಅಭಿವೃದ್ಧಿಗಾಗಿ ಪಕ್ಕಕ್ಕೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಪುತ್ಥಳಿ ಜನರಿಗೆ ಕಾಣದಂತಾದ ಕಾರಣ ಅಭಿವೃದ್ಧಿಗೆ ಪಾಲಿಕೆ ಸದಸ್ಯ ಸುರೇಶ ಬೇದರೆ ಮನವಿ ಸಲ್ಲಿಸಿದ್ದರು. ಇದನ್ನು ಮನಗಂಡು ತಮ್ಮ ಅನುದಾನದ ಅಡಿ ಅಂದಾಜು 8 ಲಕ್ಷ ರೂ. ಮಂಜೂರು ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರೊ.ಕೆ.ಜಿ. ಕುಂದಣಗಾರ ಪುತ್ಥಳಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣಬೇಕಲ್ಲದೆ, ಅವರ ಕುರಿತು ಜನರೂ ಅರಿಯಬೇಕಿದೆ. ಕನ್ನಡಕ್ಕಾಗಿ ದುಡಿದ ಮಾಹಾನ್​ ವ್ಯಕ್ತಿಯಾಗಿದ್ದ ಅವರು ಕನ್ನಡ ಭಾಷೆಯ ಅಭಿಮಾನಿಗಳಿಗೆ ಸ್ಫೂತಿರ್ಯಾಗಿದ್ದರು. ಹೀಗಾಗಿ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಪಾಲಿಕೆ ಸದಸ್ಯ ಸುರೇಶ ಬೇದರೆ ಅಧ್ಯಕ್ಷತೆ ವಹಿಸಿದ್ದರು. ಬಂಗಾರ ಬಳಗದ ಸಂಚಾಲಕ ವಸಂತ ಅರ್ಕಾಚಾರ, ವಿಶ್ವಕರ್ಮ ಸಮಾಜದ ಅಧ್ಯ ಶಿವಣ್ಣ ಬಡಿಗೇರ, ಕಾಳಪ್ಪ ಬಡಿಗೇರ, ವಿಠ್ಠಲ ಕಮ್ಮಾರ, ಎಂ.ಬಿ ಬಡಿಗೇರ, ವಸಂತ ಕಿಲ್ಲೇದ, ಸಿ.ಪಿ ಮಾಯಾಚಾರ, ಸುಮಿತ್ರಾ ಬಡಿಗೇರ, ಕಸ್ತೂರಿ ಬಡಿಗೇರ, ಮೋಹನ ರಾಮದುರ್ಗ, ಲಾರೆನ್ಸ್​ ಝಳಕಿ, ಸಂತೋಷ ಬಡಿಗೇರ, ಪ್ರಕಾಶ ಬೆಲೂರ, ಮಂಜುನಾಥ ಬಡಿಗೇರ, ಬಸವರಾಜ ಬಡಿಗೇರ, ಜಿ.ಕೆ ಪತ್ತಾರ, ಗುರುನಾಥ ಪಟ್ಟಣಕೊಡಿ, ಪಾಂಡು ಬಡಿಗೇರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net