

ಕುಶಾಲನಗರ:
ಕುಶಾಲನಗರ ಕೊಡವ ಸಮಾಜದ ಪುತ್ತರಿ ಊರೋರ್ಮೆ ಸಂತೋಷ ಕೂಟ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುAಡ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಡಾ. ಉಳುವಂಗಡ ಕಾವೇರಿ ಉದಯ ಪುತ್ತರಿ ಹಬ್ಬದ ಬಗ್ಗೆ ಮಾಹಿತಿ ನೀಡಿದರು. ಪದ್ಧತಿ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವತ್ತ ಗಮನಹರಿಸಬೇಕು ಮತ್ತು ಹೊಸ ಪಿಳಿಗೆಗೆ ಇದರ ಮಹತ್ವದ ಬಗ್ಗೆ ತಿಳುವಳಿಕೆ ನೀಡಬೇಕು ಎಂದರು.
ಅಧ್ಯಕ್ಷರಾದ ವಾಂಚೀರ ಮನು ನಂಜುAಡ ಮಾತನಾಡಿ ನಮ್ಮ ಜನಾಂಗದ ಆಚಾರ ವಿಚಾರವನ್ನು ಎಲ್ಲರೂ ಚಾಚೂ ತಪ್ಪದೆ ಬೆಳಸಿಕೊಂಡು ಯುವ ಪಿಳಿಗೆಗೆ ಕಲಿಸಿಕೊಡುವ ಕೆಲಸ ಮಾಡಬೇಕು. ಹಾಗಿದ್ದರೆ ಮಾತ್ರ ನಮ್ಮ ಕಲೆ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮ ಮಕ್ಕಳ ಸಂಖ್ಯಾಬಲ ಕಮ್ಮಿಯಾಗುತ್ತಿದೆ ಆದುದರಿಂದ ಅದನ್ನು ಮನದಟ್ಟು ಮಾಡಿಕೊಳ್ಳಬೇಕು. ಕಟ್ಟೆಮಾಡು ದೇವಸ್ಥಾನದಲ್ಲಿ ತೆಗೆದುಕೊಂಡ ನಿರ್ಣಯ ನಮ್ಮ ಜನಾಂಗ ಒಪ್ಪುವಂಥದಲ್ಲ, ನಮ್ಮ ಕುಪ್ಪಸ ಮತ್ತು ಆಚಾರ ವಿಚಾರಕ್ಕೆ ಧಕ್ಕೆ ಬಂದಾಗ ನಾವೆಲ್ಲ ಒಂದಾಗಿ ಖಂಡಿಸಬೇಕು ಎಂದರು.
ವೇದಿಕೆಯಲ್ಲಿ ಕಾರ್ಯದರ್ಶಿ ಅಯಿಲಪಂಡ ಸಂಜು ಬೆಳ್ಳಿಯಪ್ಪ, ಖಜಾಂಚಿ ಬೊಳ್ಳಚಂಡ ಸನ್ನಿ ಮುತ್ತಣ್ಣ, ಮೈಂದಪAಡ ಜಗದೀಶ, ನಂದಿನೆರವAಡ ನಳಿನಿ ಜಗದೀಶ್, ಚರ್‌ಮಂದAಡ ಪ್ರಕಾಶ್ ಪಳಂಗಪ್ಪ, ಅಲ್ಲಾರಂಡ ಹೇಮಾವತಿ ಮತ್ತಿತರರು ಇದ್ದರು.
ಮಕ್ಕಳು ಕೊಡವ ಹಾಡಿಗೆ ನೃತ್ಯ ಮಾಡಿದರು. ಕೊಡಗಿನ ಕಲೆಯಾದ ಉಮ್ಮತಾಟ್, ಪರೆಯಕಳಿ ಪ್ರದರ್ಶಿಸಿದರು. ಉತ್ತಮ ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು. ಸಮಾಜ ಸೇವೆ ಮಾಡಿದ ಹಿರಿಯ ಸದಸ್ಯ ಬಲ್ಲಾರಂಡ ಜಾಲಿ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.