ಪುಟ್ಟರಾಜುಗೆ ಡಾಕ್ಟರೇಟ್

puttaraju
Published on

ಕುಶಾಲನಗರ:

ಹೆಗ್ಗಡದೇವನಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪುಟ್ಟರಾಜು ಸಿ. ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡಾ. ಎನ್. ಆನಂದ ಗೌಡ ಮಾರ್ಗದರ್ಶನದಲ್ಲಿ "ಕೊಡಗು ಜಿಲ್ಲಾ ಪಂಚಾಯತ್‌ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಮತ್ತು ಸವಾಲುಗಳು: ಒಂದು ಅಧ್ಯಯನ" ವಿಷಯವಾಗಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಡಿಸಿದ್ದು, ವಿಶ್ವವಿದ್ಯಾನಿಲಯವು ಮಹಾಪ್ರಬಂಧವನ್ನು ಅಂಗೀಕರಿಸಿ ಡಾಕ್ಟರೇಟ್ ಪದವಿ ನೀಡಿದೆ.

ಇವರು ಈ ಹಿಂದೆ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ 14 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪುಟ್ಟರಾಜು ಸಿ., ಪಿರಿಯಾಪಟ್ಟಣ ತಾಲೂಕು ಸತ್ಯಗಾಲ ಗ್ರಾಮದ ಎಚ್.ಎನ್. ಚಂದ್ರಾಚಾರ್ ಮತ್ತು ರತ್ನಮ್ಮ ದಂಪತಿ ಪುತ್ರ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net