

ಶಿರಹಟ್ಟಿ: ಮಾಗಡಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಹಾಗೂ ಬಸವೇಶ್ವರ ಭಜನಾ ಮಂಡಳಿಯಿಂದ ಶ್ರಾವಣಮಾಸದ ಪ್ರಯುಕ್ತ ಶ್ರೀ ವೀರಭದ್ರೇಶ್ವರ, ಹಾನಗಲ್ಲ ಕುಮಾರೇಶ್ವರ ಹಾಗೂ ಪಂಡಿತ್ ಪುಟ್ಟರಾಜ ಗವಿಗವಾಯಿಗಳ ಜಯಂತ್ಯುತ್ಸವ ಪ್ರಯುಕ್ತ ಶ್ರೀ ವೀರಭದ್ರೇಶ್ವರ, ಹಾನಗಲ್ಲ ಕುಮಾರೇಶ್ವರ, ಗುರುಪುಟ್ಟರಾಜರ ಭಾವಚಿತ್ರಗಳ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಶ್ರದ್ಧಾ, ಭಕ್ತಿಯಿಂದ ಬುಧವಾರ ಗ್ರಾಮದಲ್ಲಿ ಜರುಗಿತು.
ವಿಶೇಷ ಪೂಜೆ, ಮಂಗಲೋತ್ಸವ ನಂತರ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು. ವೇದಮೂರ್ತಿ ಫಕೀರಯ್ಯ ಹಿರೇಮಠ, ವಿರೂಪಾಕ್ಷಪ್ಪ ನವಲಿ, ಅಶೋಕ ಪಲ್ಲೇದ, ವಿ.ಕೆ. ಅಂಗಡಿ, ಶಿವರಾಜಗೌಡ ಪಾಟೀಲ, ಮಂಜುನಾಥ ಇಟಗಿ, ಲೋಕಯ್ಯ, ನಾಗರಾಜ ತೋಟರ, ಗಂಗಯ್ಯ ಹಿರೇಮಠ, ಸೇವಾ ಸಮಿತಿ, ಭಜನಾ ಮಂಡಳಿ ಸದಸ್ಯರು ಇದ್ದರು.