ಪುಟ್ಟರಾಜರ ಸ್ಮಾರಕ ಪೂರ್ಣಗೊಂಡೀತೆ?

PUTTARAJA GAVAYI
Published on

ಗದಗ: ಡಾ. ಪಂಡಿತ್ ಭೀಮಸೇನ ಜೋಶಿ ಜಿಲ್ಲಾ ರಂಗಮAದಿರ ಲೋಕಾರ್ಪಣೆ ಬೆನ್ನಲ್ಲೇ ಅಪೂರ್ಣಗೊಂಡಿರುವ, ವಿಶ್ವದಾದ್ಯಂತ ಕೋಟ್ಯಂತರ ಭಕ್ತರನ್ನು ಹೊಂದಿರುವ ಪುಟ್ಟರಾಜ ಕವಿ ಗವಾಯಿಗಳವರ ಸ್ಮಾರಕ ಭವನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಭಕ್ತರನ್ನು ಕಾಡುತ್ತಿದೆ.

ರಾಜಕಾರಣ, ಎಪಿಎಂಸಿ ಸಮಿತಿಯ ಒಳಬೇಗುದಿಯಿಂದ ನಾನಾ ಸಂದಿಗ್ಧತೆಯಲ್ಲೇ ಆರಂಭವಾದ ನಡೆದಾಡುವ ದೇವರು, ಪುಟ್ಟರಾಜ ಕವಿ ಗವಾಯಿಗಳವರ ಸ್ಮಾರಕ ಭವನ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಎಚ್.ಕೆ. ಪಾಟೀಲರು ಪ್ರವಾಸೋದ್ಯಮ ಸಚಿವರಾದ ನಂತರ ಸ್ಮಾರಕ ಭವನ ಪೂರ್ಣಗೊಳ್ಳುವ ಆಶಾಭಾವನೆ ಚಿಗುರೊಡೆದಿದೆ, ಇತ್ತೀಚೆಗೆ ಭೀಮಸೇನ ಜೋಶಿ ಕಲಾ ರಂಗಮAದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ. ಪಾಟೀಲ ಈ ವಿಷಯ ಪ್ರಸ್ತಾಪಿಸಿದರು.

ಅಗತ್ಯ ಇರುವ ಅನುದಾನ ಬಿಡುಗಡೆಗೊಳಿಸುವ ಭರವಸೆಯನ್ನೂ ನೀಡಿದ್ದಾರೆ.

ಅನುದಾನದ ಕೊರತೆ ಮತ್ತು ಗುತ್ತಿಗೆದಾರನಿಗೆ ಕೊನೆಯ ಬಿಲ್ ಪಾವತಿ ಆಗದ ಹಿನ್ನೆಲೆ ಅರ್ಧಕ್ಕೆ ನಿಂತಿರುವ ಕಟ್ಟಡದ ಆವರಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ.

ಮಠದ ದರ್ಶನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರಲ್ಲಿ ತೀವ್ರ ನಿರಾಸೆ ಮೂಡಿದ್ದು, ಆದಷ್ಟು ಬೇಗ ಸ್ಮಾರಕ ಪೂರ್ಣಗೊಳಿಸಿ ಲಿಂಗೈಕ್ಯ ಪುಟ್ಟರಾಜ ಕವಿ ಗವಾಯಿಗಳ ಸ್ಮರಣೆಗೆ ಸ್ಮಾರಕ ಲೋಕಾರ್ಪಣೆ ಮಾಡಬೇಕೆಂಬುದು ಭಕ್ತರ ಒತ್ತಾಯವಾಗಿದೆ.\

ಬಿದರೂರು ಶ್ರಮ: ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ೫ ಕೋಟಿ ರೂ. ಮತ್ತು ಎರಡು ಎಕರೆ ಜಮೀನು ಒದಗಿಸುವ ಆಶ್ವಾಸನೆ ನೀಡಿದ್ದರು.

ಅದರಂತೆ ಜಿಲ್ಲಾಧಿಕಾರಿ ಖಾತೆಗೆ ೫ ಕೋಟಿ ರೂ. ಬಂದಿತು. ಆದರೆ, ೨ ಎಕರೆ ಜಮೀನು ಒದಗಿಸುವುದು ಕಷ್ಟವಾಯಿತು. ಈಗಿನ ಹೊಸ ಬಸ್ ನಿಲ್ದಾಣ ಪಕ್ಕದಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಪಟ್ಟು ಹಿಡಿದಿದ್ದರು. ಹಲವು ಪ್ರಯತ್ನಗಳನ್ನೂ ಮಾಡಿದ್ದರು.

ರಾಜಕೀಯ ಕಾರಣಕ್ಕೆ ಅವರ ಯೋಜನೆ ಸಾಕಾರಗೊಳ್ಳಲಿಲ್ಲ. ಇನ್ನು ಎಪಿಎಂಸಿ ಆವರಣದಲ್ಲಿ ಎರಡು ಎಕರೆ ಪ್ರದೇಶ ಮಂಜೂರು ಮಾಡುವುದೂ ಸಾಧ್ಯವಾಗಲಿಲ್ಲ. ಕೇವಲ ೨೬ ಗುಂಟೆ ಮಾತ್ರ ಎಪಿಎಂಸಿಯಿAದ ಮಠಕ್ಕೆ ಒದಗಿಸಲಾಯಿತು.

ಮುಂದೆ ತಾಂತ್ರಿಕ ಕಾರಣಗಳಿಂದ ೬ ವರ್ಷ ಟೆಂಡರ್ ಪ್ರಕ್ರಿಯೆ ನಡೆಯಲೇ ಇಲ್ಲ. ಹೀಗಾಗಿ ಯೋಜನೆಗೆ ಆರಂಭದಿAದಲೂ ವಿಘ್ನಗಳು ಎದುರಾಗುತ್ತಲೇ ಇವೆ.

ಬಜೆಟ್ ನಿರೀಕ್ಷೆ: ಗುತ್ತಿಗೆದಾರನಿಗೆ ೧.೨೪ ಕೋಟಿ ರೂ. ಬಿಲ್ ಬಾಕಿ ಉಳಿದಿದೆ. ಜತೆಗೆ ಎರಡನೇ ಹಂತದ ಕಾಮಗಾರಿಗೆ ೫ ಕೋಟಿ ರೂ. ಒಳಗೊಂಡು ಒಟ್ಟಾರೆ ೬.೨೪ ಕೋಟಿ ರೂ. ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆದಿವೆ. ಸ್ಮಾರಕದ ಒಳಾಂಗಣ, ಪುಟ್ಟರಾಜ ಗವಾಯಿಗಳ ಮೂರ್ತಿ ಪ್ರತಿಷ್ಠಾಪನೆ, ಆಸನಗಳ ವ್ಯವಸ್ಥೆ ಸೇರಿ ಹಲವು ಪ್ರಮುಖ ಕಾಮಗಾರಿ ಬಾಕಿ ಉಳಿದಿವೆ. ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ನಿರೀಕ್ಷೆ ಜನರಲ್ಲಿ ಮೂಡಿದೆ.

ಪುಂಡರ ತಾಣ

ಕಳೆದ ಕೆಲ ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡು ಸ್ಮಾರಕದಲ್ಲಿ ಅಳಡಿಸಿದ್ದ ಟೈಲ್ಸ್, ಶೀಟ್ ಹಾಗೂ ಇತರೆ ಉಪಕರಣಗಳು ಹಾಳಾಗಿವೆ. ಆವರಣದಲ್ಲಿ , ಗಿಡಗಳು ಬೆಳೆದಿವೆ. ಭವನಕ್ಕೆ ಉಸ್ತುವಾರಿಗಳು ಯಾರೂ ಇಲ್ಲದ ಕಾರಣ ಪುಂಡರ ಅಡ್ಡೆಯಾಗುತ್ತಿದೆ.

ಸ್ಮಾರಕ ಪೂರ್ಣಗೊಳಿಸಲು ಸಚಿವರು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಸಾರ್ವಜನಿಕ ಸ್ಮಾರಕ ತೆರೆದಯಕೊಳ್ಳುವ ಆಶಯವು ಇದೆ. ಈ ಮೊದಲು ನಾವೂ ಸಾಕಷ್ಟು ಬಾರಿ ಅನುದಾನ ನೀಡುವಂತೆ ಆಗ್ರಹಿಸಿz್ದೆÃವು.| ಪೂಜ್ಯ ಕಲ್ಲಯ್ಯಜ್ಜವರು, ವೀರೇಶ್ವರ ಪುಣ್ಯಾಶ್ರಮ

ಗುತ್ತಿಗೆದಾರನಿಗೆ ಬಿಲ್ ಬಾಕಿ ೧.೨೪ ಕೋಟಿ ರೂ. ಸೇರಿ ಎರಡನೇ ಹಂತದ ಕಾಮಗಾರಿಗೆ ಅನುದಾನ ಬಿಡುಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅನುದಾನ ಬಿಡುಗಡೆ ಆಗಿರಲಿಲ್ಲ. ಎರಡನೇ ಹಂತದ ಅನುದಾನ ಬಿಡುಗಡೆ ನಂತರ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ಆರಂಭಿಸಲಾಗುವುದು. | ವೀರಯ್ಯ ಸ್ವಾಮಿ ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net