

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಪುಟ್ಟರಾಜ ಗವಾಯಿಗಳ ಜನ್ಮದಿನ ನಿಮಿತ್ತ ಸಂಗೀತೋತ್ಸವ ಹಾಗೂ ಪುಟ್ಟರಾಜ ಸಮ್ಮಾನ ಪ್ರದಾನ ಸಮಾರಂಭವನ್ನು ಮಾ. 3ರಂದು ಸಂಜೆ 5.30ಕ್ಕೆ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕದ ಹೆಸರಾಂತ ಕಿರಾಣಾ ಗ್ವಾಲಿಯರ್ ಪರಂಪರೆಯ ಗಾಯಕ ಪಂ.ಗಣಪತಿ ಭಟ್ಟ ಹಾಸಣಗಿ ಅವರಿಗೆ 2025ನೇ ಸಾಲಿನ ಪುಟ್ಟರಾಜ ಸಮ್ಮಾನವನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರದಾನ ಮಾಡಲಿದ್ದಾರೆ. ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಯಾಗಿ ರಾವೇಂದ್ರ ಆಯಿ ಆಗಮಿಸುವರು. ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸುವರು. ಶಂಕರ ಕುಂಬಿ, ಪಂ. ಡಿ. ಕುಮಾರದಾಸ್, ಪಂ. ಎಂ. ವೆಂಕಟೇಶಕುಮಾರ ಉಪಸ್ಥಿತರಿರುವರು.
ನಂತರ ಪಂ.ಗಣಪತಿ ಭಟ್ಟ ಹಾಸಣಗಿ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆ ಹಾಗೂ ಡಾ. ಪುಟ್ಟರಾಜ ಭಜಂತ್ರಿ ಶಹನಾಯಿ ವಾದನಕ್ಕೆ ದಯಾನಂದ ಸುತಾರ ತಬಲಾ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.