

ರಟ್ಟಿಹಳ್ಳಿ: ಸಂಗೀತ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೇರು ಸ್ಥಾನದಲ್ಲಿದೆ. ಅಂಧ ಮತ್ತು ಅನಾಥ ಮಕ್ಕಳಿಗೆ ಸಂಗೀತವನ್ನು ವಿಶೇಷವಾಗಿ ಅಭ್ಯಾಸ ಮಾಡಿಸಿ, ಅವರ ಬಾಳಿಗೆ ಆಶಾ ಕಿರಣವಾಗಿದ್ದ ಸಂಗೀತ ಸಾಮ್ರಾಟ, ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೂಡುಗೆ ನೀಡಿದ್ದಾರೆ ಎಂದು ಸ್ಥಳೀಯ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಬ್ಬಿಣಕಂತಿಮಠದಲ್ಲಿ ಗುರುಕೃಪಾ ಸಂಗೀತ ಪಾಠಶಾಲೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಗಾನಯೋಗಿ ಪದ್ಮಭೂಷಣ ಡಾ.ಪಂ. ಪುಟ್ಟರಾಜ ಗವಾಯಿಗಳ 13ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗುರುಕೃಪಾ ಸಂಗೀತ ಪಾಠಶಾಲೆ ಕಲಾವಿದರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಸಿ.ಎಸ್. ಚಕ್ರಸಾಲಿ, ಸೋಮೇಶ್ವರ ಮೇಸ್ತಾ, ಎನ್.ಸಿ. ಕಠಾರೆ, ನಾಗರಾಜ ಕೋಣ್ತಿ, ಮಾಲತೇಶ ಬೆಳಕೇರಿ, ಪರಮೇಶ್ವರ ಹುಲ್ಮನಿ ಇತರರು ಉಪಸ್ಥಿತರಿದ್ದರು.
ಕಾಳಿಕಾಂಬ ಮತ್ತು ಅನಿಕೇತನ ಸಂಗೀತ ಪಾಠ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.