ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಚಾದರ ವಿತರಣೆ

IMG-20240226-WA0206
Published on

ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ ಶ್ರೀ ಪುಟ್ಟರಾಜ ಗವಾಯಿಗಳ ಆಶ್ರಮ ಅಂಧ ಮಕ್ಕಳಿಗೆ ಕ್ಲಬ್ಬಿನ ಸದಸ್ಯರಾದ ಶ್ರೀಮತಿ ಯಶೋದಾ ಗದ್ದಿಕೇರಿ ಅವರು ಪ್ರತಿ ವರ್ಷದಂತೆ ಈ ವರ್ಷವೂ 45 ಚಾದರನ್ನು ದೇಣಿಗೆಯಾಗಿ ನೀಡಿದರು. ಹಾಗೂ ಇದರ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.

ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್ ಕಾರ್ಯದರ್ಶಿಯಾದ ಶ್ರೀಮತಿ ಪ್ರೀತಿ ಶಿವಪ್ಪನ ಮಠ, ಖಜಾಂಚಿಯಾದ ಶ್ರೀಮತಿ ರಾಣಿ ಚಂದಾವರಿ, ಮಾಜಿ ಅಧ್ಯಕ್ಷರಾದ ಶ್ರೀಮತಿ ಲತಾ ಮುತ್ತಿನ ಪೆಂಡಿಮಠ ಸದಸ್ಯರಾದ ಶ್ರೀಮತಿ ಶೈಲಜಾ ಭೂಸನೂರ ಮಠ, ಉಪಸ್ಥಿತರಿದ್ದರು. ಇದರ ಸದುಪಯೋಗ ಪಡೆದ ಅಂದ ಮಕ್ಕಳು ಸಂತೋಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net