

ವಿಜಯವಾಣಿ ಸುದ್ದಿಜಾಲ ಗದಗ
ಲಿಂಗೆಕ್ಯ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಇವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಶಿಾರಸ್ಸು ಹಾಗೂ ಗದಗ ಹೊಸ ರೈಲು ನಿಲ್ದಾಣಕ್ಕೆ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಪಂಡಿತ ಪುಟ್ಟರಾಜ ರೈತ ಸಂದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಂದ ಅಧ್ಯಕ್ಷ ಎಂ. ಪಿ. ಮುಳಗುಂದ ಮಾತನಾಡಿ, ನಡೆದಾಡುವ ದೇವರೆಂದೆ ಪ್ರಸಿದ್ಧಿಯಾಗಿರುವ ಲಾಂತರ ಅಂಧ, ಅನಾಥರ ಬಾಳಿನ ಬೆಳಕಾಗಿರುವ ಹಾಗೂ ಯಾವುದೇ ಧರ್ಮ, ಜಾತಿ, ಮತ, ಪಂಥ ಎನ್ನದೇ ಎಲ್ಲ ಮಕ್ಕಳಿಗೂ ಆಶ್ರಯ ನೀಡಿ ಅವರಿಗೆ ಉತ್ತಮ ಶಿಣದೊಂದಿಗೆ ಸಂಗೀತ ಶಿಣ ನೀಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿರುವ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳಿಗೆ ಭಾರತ ರತ್ನ ನೀಡಬೇಕು. ಕನ್ನಡ, ಇಂಗ್ಲೀಷ, ಹಿಂದಿ, ಸಂಸತ ಭಾಷೆಗಳನ್ನು ಬಲ್ಲವರಾಗಿದ್ದ ಶ್ರೀಗಳು ಹಿಂದಿ ಮತ್ತು ಕನ್ನಡಗಳಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ನಾಟಕ ಕಂಪನಿ ಸ್ಥಾಪಿಸಿ ಅನೇಕ ಕಲಾವಿದರಿಗೆ ಆಶ್ರಯ ನೀಡಿದ್ದರು. ಈ ಹಿನ್ನೆಲೆ ಅವರ ಸೇವೆ ಪರಿಗಣಿಸಿ ಮರನೋತ್ತರ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದರು.
ಕ್ಕೀರೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಂಗೀತ, ಸಾಹಿತ್ಯ, ನಾಟಕ, ಶೈಣಿಕ ೇತ್ರಗಳಲ್ಲಿ ಅದ್ಭುತ ಸಾಧನೆಗೈದ ಗವಾಯಿಗಳವರಿಗೆ ಈ ಮೊದಲೇ ಕೇಂದ್ರ ಸರ್ಕಾರ ಅವರ ನತೆಗೆ ತಕ್ಕಂತೆ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕಾಗಿತ್ತು. ದುರಾದೃಷ್ಟ ಪಂಡಿತರ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ. ತಾಲೂಕಿನ ಹಲವು ಶಿಣ ಸಂಸ್ಥೆಗಳ ವಿದ್ಯಾಥಿರ್ಗಳು, ಸಾವಿರಾರು ಜನ ತಮ್ಮ ಹಸ್ತಾರದ ಮೂಲಕ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಜನರ ಒತ್ತಾಸೆಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ನಗರದಲ್ಲಿ ನಿರ್ಮಾಣ ಆಗುತ್ತಿರುವ ಹೊಸ ರೈಲು ನಿಲ್ದಾಣಕ್ಕೆ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಪಂಡಿತ ಪುಟ್ಟರಾಜ ಗವಾಯಿಗಳ ಮಠದಿಂದ ಪ್ರಾರಂಭಗೊಂಡು ಪ್ರತಿಭಟನಾ ಮೆರವಣಿಗೆ ಹಳೆ ಡಿಸಿ ಆಫೀಸ್ ವೃತ್ತ, ಮುಳಗುಂದ ನಾಕಾ, ಟಿಪು$್ಪ ಸುಲ್ತಾನ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು.
ಡಾ. ಶರಣಬಸವ ಶ್ರೀಗಳು, ಬಸವರಾಜ ಬೆಳಧಡಿ, ಪೀರಸಾಬ ಕೌತಾಳ, ಜ್ಯೋತಿ ಕುಲಕಣಿರ್ ಹಲವರು ಇದ್ದರು.