

ಗದಗ:. ಕಲ್ಲು ಹೃದಯವನ್ನು ಕರಗಿಸುವಂತಹ ಶಕ್ತಿ ಸಂಗೀತಕ್ಕೆ ಇದ್ದು ಸಂಗೀತವನ್ನು ನಿರಂತರವಾಗಿ ಅಭ್ಯಾಸ ಮಾಡಬೇಕೆಂದು ಖ್ಯಾತ ಸಾಹಿತಿ ಮೈಸೂರಿನ ಜಿ ಪಿ ಬಸವರಾಜು ಅವರು ಹೇಳಿದರು .
ಡಾ.ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತರ ಭಾಷಾ ವಿಭಾಗದಿಂದ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಾ ಆಶ್ರಮದವರೇ ಆದ ಖ್ಯಾತ ಹಿಂದುಸ್ತಾನಿ ಸಂಗೀತಗಾರರಾದ ಪದ್ಮಶ್ರೀ ಎಂ ವೆಂಕಟೇಶ್ ಕುಮಾರ್ ಅವರನ್ನು ಕಲ್ಕತ್ತಾ ಬಾಂಬೆ ಪುನಾ ಅಂತ ನಗರಗಳಲ್ಲಿ ಅವರನ್ನು ದೇವರಂದೆ ಕಾಣಲಾಗುತ್ತಿದ್ದು ವಿದ್ಯಾರ್ಥಿಗಳಾದವರು ಪ್ರತಿದಿನ ಸಂಗೀತವನ್ನು ಎಂಟು ಹತ್ತು ಗಂಟೆಗಳ ಕಾಲ ಅಭ್ಯಾಸ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು , ಸಂಗೀತ ಕಲಿತವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಂತ ಉದಾಹರಣೆಗಳಿಲ್ಲ ಎಂದ ಅವರು ಮನಸ್ಸಿಗೆ ನಿರಂತರ ನೆಮ್ಮದಿಯನ್ನು ನೀಡುವಂತಹ ಏಕೈಕ ವಿದ್ಯೆ ಎಂದರೆ ಅದು ಸಂಗೀತ ಎಂದು ಅವರು ಹೇಳಿದರು.
ಕನ್ನಡ ಉಪನ್ಯಾಸಕ ವಿ ಎಂ ಗುರುಮಠ ಅವರು ಮಾತನಾಡಿ ಶ್ರೀ ಜಿ ಪಿ ಬಸವರಾಜು ಅವರು ಕನ್ನಡ ಸಾಹಿತ್ಯಕ್ಕೆ ಹಾಗೂ ಪತ್ರಿಕೋದ್ಯಮಿಗೆ ಅಮೋಘವಾದ ಕೊಡುಗೆಯನ್ನು ನೀಡಿದವರಾಗಿದ್ದು ಕಾವ್ಯ ಕಥೆ ವಿಮರ್ಶೆ ಇವರ ಆಶಕ್ತ ಕ್ಷೇತ್ರಗಳಆಗಿದ್ದು ಪ್ರಜಾವಾಣಿ, ಮಯೂರ, ಹಂತ ಪತ್ರಿಕೆಯಲ್ಲಿ ಅನೇಕ ವರ್ಷಗಳ ಕಾಲ ಸಂಪಾದಕರಾಗಿ ಕಾರ್ಯ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರ್ ವಹಿಸಿದ್ದರು ಉಪನ್ಯಾಸಕ ಎನ್ ಎಂ ಶೇಖ್,ಡಾ ಲತಾ ವೃತ್ತಿಕೊಪ್ಪ, ತಬ್ಲಾ ವಾದಕ ಶರಣಪ್ಪ ಕಲ್ಬುರ್ಗಿ,ಡಾ ಎನ್ ವಿ ಅಕ್ಕಸಾಲಿ, ಡಾ ಕೊಡಗಾನೂರು ಹನುಮಂತ್, ಡಾ, ವಿಶ್ವನಾಥ್ ಹಿರೇಮಠ, ವಾಯ್ . ಆರ. ಮೂಲಿಮನಿ ಹಾಗೂ ಕುಮಾರಿ ಯಶೋಧ ಮಾದರ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಿದ್ಯಾರ್ಥಿ ವೃಂದದವರಿಂದ ಗುರುವೇ ಶಿವನು ಶಿವನೇ ಗುರು ಅವರಲ್ಲಿ ಅಂತರವಿಲ್ಲ ವೈಯ ಎಂಬ ಪ್ರಾರ್ಥನೆ ಗೀತೆಯನ್ನು ಮಾಡಿದರು. ಕೊನೆಗೆ ಗಂಗಾಧರ್ ಹಿಡ್ಕಿಮಠ ವಂದಿಸಿದರು.