ಪುಟ್ಟಣ್ಣ ಕಣಗಾಲ್ ಸಹೋದರ ನರಸಿಂಹಶಾಸ್ತ್ರಿ ಇನ್ನಿಲ್ಲ

28BTP02 narasimha
Published on

ಬೆಟ್ಟದಪುರ (ಪಿರಿಯಾಪಟ್ಟಣ ತಾ): ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಸಹೋದರ ನರಸಿಂಹಶಾಸ್ತ್ರಿ (84) ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು.ರಾಮಸ್ವಾಮಯ್ಯ ಮತ್ತು ಸುಬ್ಬಮ್ಮ ಅವರ ಕೊನೆಯ ಪುತ್ರರಾದ ನರಸಿಂಹಶಾಸ್ತ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಸೇರಿದಂತೆ ಒಟ್ಟು ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು. ನರಸಿಂಹಶಾಸ್ತ್ರಿ ಕಣಗಾಲು ಗ್ರಾಮದ ಅಂಚೆ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸಿ ನಿವೃತ್ತಿ ಹೊಂದಿದ ಬಳಿಕ ಬೆಂಗಳೂರಿನಲ್ಲಿರುವ ಪುತ್ರಿ ಜತೆಯಲ್ಲಿ ವಾಸವಾಗಿದ್ದರು.

ಬುಧವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಗುರುವಾರ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದಲ್ಲಿರುವ ಪುತ್ರಿ ಹಾಗೂ ಅಳಿಯ ಕಾವೇರಿ ನದಿಗೆ ಅಸ್ಥಿ ವಿಸರ್ಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net