ಪಂ. ಪುಟ್ಟರಾಜರ ಗವಾಯಿಗಳ ಸಾಧನೆ ಅವಿಸ್ಮರಣೀಯ

RATHA
Published on

ಗಜೇಂದ್ರಗಡ: ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಮೋಘ ಸೇವೆ ಸಲ್ಲಿಸುವುದರ ಜತೆಗೆ ಅಸಂಖ್ಯಾತ ಅಂಧರ ಬಾಳಿಗೆ ಬೆಳಕು ನೀಡಿದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಾಧನೆ ಜಾಗತಿಕ ವಟ್ಟದಲ್ಲಿ ಅವಿಸ್ಮರಣೀಯ ಎಂದು ಶ್ರೀಗುರು ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷ ಮಹಾಂತೇಶ ಹಿಡಕಿಮಠ ಹೇಳಿದರು.

ಪದ್ಮಭೂಷಣ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳರವರ ಪುಣ್ಯ ಸ್ಮರಣೆ ಪ್ರಯುಕ್ತ ಪಟ್ಟಣದ ಮೈಸೂರುಮಠದ ಹತ್ತಿರ ಶ್ರೀ ಗುರು ಪುಟ್ಟರಾಜ ಸೇವಾ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಟ್ಟರಾಜ ಗವಾಯಿಗಳ ಸಾಧನೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಎಲ್ಲರಿಗೂ ಮುಖದಲ್ಲಿ ಕಣ್ಣಿದ್ದರೆ ಗಾನಯೋಗಿ ಕವಿ ಪುಟ್ಟರಾಜ ಗವಾಯಿಯವರಿಗೆ ಹೃದಯಕ್ಕೆ ಕಣ್ಣಿತ್ತು. ಆ ಕಣ್ಣಿನಲ್ಲಿಯೆ ಶಿಷ್ಯರನ್ನು ನೋಡುತ್ತಿದ್ದರು. ತಾವು ಅಂಧರಾದರು ಅಂಧರ ಬಾಳಿಗೆ ಕಣ್ಣಾದರು ಎಂದು ಹೇಳಿದರು.

ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ, ಶಾಂತಯ್ಯ ಶಾಂತಗೇರಿಮಠ, ಮಹದೇವಪ್ಪ ಪವಾರ, ನಿಂಗಪ್ಪ ಹೂಗಾರ, ಬಸವರಾಜ ಹೂಗಾರ, ಖಾಜೇಸಾಬ ಬಾಗವಾನ, ಮೋಮಿನ್, ಮಾಂತೇಶ ಪವಾರ, ಮುತ್ತಣ್ಣ ತಾಳೀಕೋಟಿ, ಶಿವು ಬನಿಗೋಳ, ಪ್ರವೀಣ ಕರಮುಡಿ, ಸಂಗಮೇಶ ಕರಮುಡಿ, ಗಂಗಾಧರ ಮಡಿವಾಳರ, ಬುಡ್ಡಾ ಮೋಮಿನ, ಪ್ರವೀಣ ಹಿರೇಮಠ, ಮಲ್ಲು ಶಾಸ್ತ್ರೀ, ಮಹದೇವಪ್ಪ ಯಂಕಂಚಿ, ಕೃಷ್ಣ ತಳವಾರ, ಮಂಜುನಾಥ ಬಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net