

ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ನಿರಂತರ ನಿರ್ಲಕ್ಷ್ಯದಿಂದಾಗಿ ಜಿಲ್ಲಾ ಕೇಂದ್ರದಲ್ಲಿ ುಟ್ ಪಾತ್ ಒತ್ತುವರಿಯಾಗಿದ್ದು, ಅನಿವಾರ್ಯವಾಗಿ ಜನ ಸಾಮಾನ್ಯರು ನಡು ರಸ್ತೆಯಲ್ಲಿ ಓಡಾಡಬೇಕಾದ ಸಮಸ್ಯೆಸೃಷ್ಟಿಯಾಗಿದೆ.
ಹೌದು! ರಾಜಾರೋಷವಾಗಿ ನಗರದ ಪ್ರಮುಖ ರಸ್ತೆಗಳ ುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಹಾಡಹಗಲೇ ಕಾಣಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಕಿರಿಕಿರಿ, ರಸ್ತೆಗಳಲ್ಲಿ ಅಪಘಾತ ಪ್ರಕರಣ ಹೆಚ್ಚಳ ಸೇರಿ ನಾನಾ ಸಮಸ್ಯೆಗಳು ಜನರನ್ನು ಬಾಧಿಸುವಂತಾಗಿದೆ.
ಜಿಲ್ಲಾ ಕೇಂದ್ರವು ಮೊದಲಿನಿಂದಲೂ ನಿಯಮಗಳ ಉಲ್ಲಂಘನೆಗೆ ಹೆಸರುವಾಸಿಯಾಗಿದೆ. ಸರ್ಕಾರಿ ಜಾಗಗಳ ಒತ್ತುವರಿಯಾಗುತ್ತಿವೆ. ಯಾವುದೇ ಪರವಾನಗಿ ಪಡೆಯದೆ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ. ಇದರ ಬಗ್ಗೆ ಹಲವರು ಸ್ವಯಂ ಪ್ರೇರಣೆಯಿಂದ ದೂರು ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುವುದಿಲ್ಲ. ಇದರಿಂದ ದೂರುದಾರರೇ ತೊಂದರೆ ಅನುಭವಿಸಬೇಕಾಗಿದೆ.
ಕಾರ್ಯಾಚರಣೆ ಮರೆತ ಅಧಿಕಾರಿಗಳು
ಈ ಹಿಂದೆ 15 ದಿನಕ್ಕೊಮ್ಮೆ ಪೊಲೀಸರು, ನಗರಸಭೆ ಅಧಿಕಾರಿಗಳ ತಂಡವು ಖುದ್ದು ಭೇಟಿ ನೀಡಿ, ಅಕ್ರಮ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದವು. ಆದರೆ, ಇದೀಗ ಹೊಂದಾಣಿಕೆ ಧೋರಣೆಯನ್ನು ಪ್ರದರ್ಶಿಸಲಾಗುತ್ತಿದೆ. ಹೊಟ್ಟೆಪಾಡಿನ ನೆಪವನ್ನು ಹೇಳಿ ನುಣುಚಿಕೊಳ್ಳುತ್ತಿದ್ದು ಕೆಲ ಸಿಬ್ಬಂದಿ ುಟ್‌ಪಾತ್ ಒತ್ತುವರಿದಾರರಿಂದ ಹಣ ವಸೂಲಿ ಮಾಡಿ, ಸುಮ್ಮನಾಗುತ್ತಿದ್ದಾರೆ. ಇದಕ್ಕೆ ಮತ್ತಷ್ಟು ಬೆಂಬಲ ನೀಡುವಂತೆ ಪ್ರತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಒತ್ತುವರಿದಾರರ ಪರ ಬ್ಯಾಟ್ ಬೀಸುತ್ತಿದ್ದು, ಪ್ರಭಾವಿಗಳ ನೆರಳು, ಅಧಿಕಾರಿಗಳ ಅಸಡ್ಡೆ ಧೋರಣೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಯು ಹದಗೆಡುತ್ತಿದೆ.
ಹೆದ್ದಾರಿಗಳ ುಟ್‌ಪಾತ್ ಒತ್ತುವರಿ
ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆ ನಗರದಲ್ಲಿ ಹಾದು ಹೋಗಿರುವ ಪ್ರಮುಖ ಜನ ಮತ್ತು ವಾಹನ ಸಂದಣಿಯದೊಡ್ಡ ರಸ್ತೆಗಳು. ಎರಡು ಬದಿಯಲ್ಲೂ ಲಕ್ಷಾಂತರ ರೂ.ವೆಚ್ಚ ಮಾಡಿ, ುಟ್‌ಪಾತ್ ನಿರ್ಮಿಸಲಾಗಿದೆ. ಅಲ್ಲಲ್ಲಿ ಸಿಮೆಂಟ್ ಕಲ್ಲುಗಳು ಕಿತ್ತು ಬಂದಿವೆ. ಗುಂಡಿಗಳು ಬಿದ್ದಿವೆ. ಇನ್ನು ಮುಖ್ಯವಾಗಿ ತಳ್ಳುವ ಗಾಡಿಗಳು, ಮೊಬೈಲ್ ಕ್ಯಾಂಟಿನ್ ವಾಹನಗಳು, ಅಂಗಡಿ ಪರಿಕರಗಳು, ಹೋಟೆಲ್ ನಾಮಲಕಗಳು, ಟೆಂಟ್ ಟಾರ್ಪಲ್‌ಗಳು ಅಡ್ಡಲಾಗಿವೆ. ಇವುಗಳ ನಡುವೆ ಪಾದಚಾರಿಗಳಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕರು ುಟ್‌ಪಾತ್ ಬಿಟ್ಟು ನಡುರಸ್ತೆಯಲ್ಲಿ ಸಾಗುತ್ತಿದ್ದು, ವೇಗವಾಗಿ ಬಂದು ವಾಹನಗಳು ಡಿಕ್ಕಿ ಹೊಡೆದು, ಅಪಘಾತಗಳು ಸಂಭವಿಸುತ್ತಿವೆ. ಬಜಾರ್ ರಸ್ತೆ, ಗಂಗಮ್ಮನಗುಡಿ ರಸ್ತೆ, ಒಪಿಒ ರಸ್ತೆ, ಕಾರ್ಖಾನೆಪೇಟೆ, ಮಹಾಕಾಳಿ ದೇವಸ್ಥಾನದ ರಸ್ತೆ, ಸಾಧುಮಠ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲೂ ಅಕ್ರಮ ಒತ್ತುವರಿ ಕಂಡುಬರುತ್ತದೆ. ಅನಧಿಕೃತವಾಗಿ ಸಿಮೆಂಟ್ ಕಾಂಕ್ರಿಟ್ ಹಾಕಿ ಮೆಟ್ಟಿಲುಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಇದರ ನಡುವೆ ಅಡ್ಡಲಾಗಿ ನಿಂತ ವಾಹನಗಳು ಸುಗಮ ಸಂಚಾರಕ್ಕೆ ತೊಡಕಾಗಿದೆ.
ದಂಡ ವಸೂಲಿಯಷ್ಟೇ ಪೊಲೀಸರ ಸಾಧನೆ
ವಾಹನ ಸವಾರರಿಂದ ದಂಡ ವಸೂಲಿಯೇ ದೊಡ್ಡ ಸಾಧನೆ ಎನ್ನುವ ಧೋರಣೆಯನ್ನು ಸಂಚಾರಿ ಠಾಣೆಯ ಪೊಲೀಸರು ಪ್ರದರ್ಶಿಸುತ್ತಿದ್ದಾರೆ. ಅಪರಾಧ ತಡೆ ಮಾಸಾಚರಣೆ ಮತ್ತು ಸುಗಮ ಸಂಚಾರ ವ್ಯವಸ್ಥೆಯ ಜಾಗೃತಿ ಸಭೆ ಮತ್ತು ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದೆ. ಅಡ್ಡಾದಿಡ್ಡಿ ವಾಹನ ನಿಲುಗಡೆ, ಚಾಲನೆ ವೇಳೆ ಹೆಲ್ಮೆಟ್ ಧರಿಸದ ಮತ್ತು ದಾಖಲೆಗಳನ್ನು ಹೊಂದಿರದ ಸವಾರರಿಗೆ ದಂಡ ವಿಧಿಸಿ ಸುಮ್ಮನಾಗುತ್ತಿದ್ದಾರೆ. ುಟ್‌ಪಾತ್ ಒತ್ತುವರಿಯಿಂದ ಜನರು ಓಡಾಡಲು ಸಾಧ್ಯವಾಗದೇ ಉಂಟಾಗುತ್ತಿರುವ ಟ್ರಾಫಿಕ್ ಕಿರಿಕಿರಿಯನ್ನು ದೊಡ್ಡ ಸಮಸ್ಯೆಯನ್ನಾಗಿಯೇ ಪರಿಗಣಿಸುತ್ತಿಲ್ಲ.
"ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಪ್ರಮುಖ ರಸ್ತೆಗಳ ುಟ್‌ಪಾತ್ ಅಕ್ರಮ ಒತ್ತುವರಿಯಾಗಿದೆ. ಜನರ ಓಡಾಟದ ಬದಲಿಗೆ ಖಾಸಗಿ ವಾಣಿಜ್ಯ ವಹಿವಾಟು ನಡೆಸಲು ಹೆಚ್ಚಿಗೆ ಬಳಕೆಯಾಗುತ್ತಿದೆ. ಪೊಲೀಸರು ಮತ್ತು ನಗರಸಭೆ ಏನು ಕ್ರಮ ಕೈಗೊಳ್ಳುತ್ತಿಲ್ಲ". - ಸಂತೋಷ್ ಕುಮಾರ್ ಸ್ಥಳೀಯ ನಿವಾಸಿ "ಚಿಕ್ಕಬಳ್ಳಾಪುರದ ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆಯ ುಟ್‌ಪಾತ್ ಮೇಲೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬಹುತೇಕ ಅಂಗಡಿ ಮಾಲೀಕರು ಗದರಿ ಕಳುಹಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಗೌರಿಬಿದನೂರು ವೃತ್ತದಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ಸ್ಥಳದಲ್ಲಿದ್ದವರು ಸಮಾಧಾನಪಡಿಸಿ, ಸುಮ್ಮನೆ ಹೋಗಲು ಸಲಹೆ ನೀಡಿದರು. ರಸ್ತೆಯಲ್ಲಿ ಸಾಗಬೇಕೋ? ುಟ್‌ಪಾತ್ ಮೇಲೆ ಓಡಾಡಬೇಕೋ? ಅರ್ಥವಾಗುತ್ತಿಲ್ಲ". - ರಾಮಕೃಷ್ಣ ಪಾದಚಾರಿ