

ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ಪುಟಾಣಿ ವಿಜ್ಞಾನ ಪರೀಕ್ಷೆಯಲ್ಲಿ ಸಾಧನೆ ಮಾಡಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪುಟಾಣಿ ವಿಜ್ಞಾನ ಬಳಗದವರು ನಡೆಸಿದ ರಾಷ್ಟ್ರಮಟ್ಟದ ಗಣಿತ ಪ್ರತಿಭಾ ಪರೀಕ್ಷೆ ಯಲ್ಲಿ ಚೇರಂಬಾಣೆ ಕೊಟ್ಟೂರು ರಾಜರಾಜೇಶ್ವರಿ ಶಾಲೆಯ ಒಟ್ಟು 68 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿದ್ದಾರೆ . ಮಕ್ಕಳ ಸಾಧನೆಗೆ ಮುಖ್ಯಶಿಕ್ಷಕರಾದ ಕವನ್ ಕುದುಪಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸ್ವರೂಪಾ, ಗಣಿತ ಶಿಕ್ಷಕಿ ಟೀನಾ ಮಾರ್ಗದರ್ಶನ ನೀಡಿದ್ದರು.