ಭೇದ, ಭಾವ ಬದಿಗಿಟ್ಟು ಸಾಕ್ಷರರಾಗಿ

New Tenginakayi New
Published on

ಹುಬ್ಬಳ್ಳಿ : ಜಾತಿ , ಧರ್ಮ, ಲಿಂಗತಾರತಮ್ಯಗಳನ್ನು ಬದಿಗಿಟ್ಟು ಎಲ್ಲರೂ ಸಾಕ್ಷರರಾಗಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಇಲ್ಲಿನ ಗೋಪನಕೊಪ್ಪದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸಾಕ್ಷರತೆ ಎಂದರೆ ಓದುವ ಮತ್ತು ಬರೆಯುವ ಸಾಮರ್ಥ್ಯಾಗಿದೆ. ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯುವ ಮೂಲಕ ಶಿಕ್ಷಣದ ಮಹತ್ವವನ್ನು ಸಾರೋಣ ಎಂದು ತಿಳಿಸಿದರು.

ಓದಲು, ಬರೆಯುವುದನ್ನು ಕಲಿಯಲಾಗದ ವಯಸ್ಕರಿಗೆ ಅರಿವು ಮೂಡಿಸಿ, ಅವಕಾಶ ಕಲ್ಪಿಸಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳವಣಿಗೆ ಹೊಂದುವಂತೆ ಮಾಡಬೇಕು ಎಂದರು.

ಪಾಲಿಕೆ ಸದಸ್ಯರಾದ ಎಂ.ವೈ. ನರಗುಂದ, ಬೀರಪ್ಪ ಖಂಡೇಕರ, ಪ್ರಮುಖರಾದ ಈಶ್ವರಗೌಡ ಪಾಟೀಲ, ರಮೇಶ ಮಹದೇವಪ್ಪನವರ, ಸತೀಶ ಬೊಮ್ಮನಳ್ಳಿ, ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಫ್. ಚುಳಕಿ, ಪ್ರಾಚಾರ್ಯರಾದ ಶೋಭಾ ಮಂಗಸೂಳೆ, ಮುಖೊ್ಯೕಪಾಧ್ಯಾಯ ವೈ.ಎಚ್. ಬಣವಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net