ಅಕ್ರಮ ದಂಧೆಗೆ ಕಡಿವಾಣ ಹಾಕಿ

Put a stop to illegal trade
ವಿಜಯಪುರ ಜಿಲ್ಲಾಡಳಿತಕ್ಕೆ ಜಯ ಕರ್ನಾಟಕ ಸಂಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಿದ್ದನಗೌಡ ದಾಶ್ಯಾಳ, ಪಿಂಟು ಗೊಬ್ಬೂರ, ಮುಕದಸ್​ ಇನಾಮದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್​ಗಳನ್ನು ಅಕ್ರಮವಾಗಿ ಆಟೋಗಳಿಗೆ ತುಂಬಿಸುವ ದಂಧೆಗೆ ಕಡಿವಾಣ ಹಾಕಲು ಆಗ್ರಹಿಸಿ ಜಯ ಕರ್ನಾಟಕ ಸಂಟನೆ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಸಂಗಮೇಶ ಸಿದ್ದನಗೌಡ ದಾಶ್ಯಾಳ ಮಾತನಾಡಿ, ನಗರದ ಅಡುಗೆ ಅನಿಲದ ಅಕ್ರಮ ದಂಧೆ ಅವ್ಯಾಹತವಾಗಿ ನಡೆದಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ವ್ಯಾಪಕವಾಗಿ ದಾಳಿ ನಡೆಸಿ, ಅಕ್ರಮಕ್ಕೆ ಕಡಿವಾಣ ಹಾಕಬೇಕೆಂದರು.

ಮುಖಂಡರಾದ ಪಿಂಟು ಗೊಬ್ಬೂರ, ಮುಕದಸ್​ ಇನಾಮದಾರ, ಸಿದ್ರಾಮ ಹೋಳಿ, ಆನಂದ ಹುನ್ನೂರ, ಶಿವರಾಜಗೌಡ ಪಾಟೀಲ, ಅಶೋಕ ಕೊಡಗ, ವಿರೇಶ ಪಾಟೀಲ, ಉಮೇಶ ಚಲವಾದಿ, ಸಂಗಮೇಶ ಗಾಣಿಗೇರ, ಮಲ್ಲು ಜಮಖಂಡಿ, ಚಿದಾನಂದ ಮಠಪತಿ, ಜಸಪೀತ್​ ಸಿಂಗ್​ ಗ್ಯಾನಿ, ಮೀಣಾ ಪತ್ತಾರ, ಲಕ್ಷಿ$್ಮ ದಾಶ್ಯಾಳ, ಮಲ್ಲಮ್ಮ ಲಮಾಣಿ, ಕವಿತಾ ಖಿಲಾರಿ, ಮಂಜುಳಾ ಮುತ್ತಗಿಕರ, ಸುಜಾತಾ ಪೂಜಾರಿ, ಅನ್ನಪೂರ್ಣ ಕೋಳಿ, ಗಾಯತ್ರಿ ರೇಡೇಕರ, ಗಾಯತ್ರಿ ಬೆನಕನಹಳ್ಳಿ, ರಾಜಶ್ರೀ ವಾಲಿಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net