

* ಅರಣ್ಯ ಇಲಾಖೆಗೆ ದೊಡ್ಡ ಸವಾಲು
* ರೈತರಿಗೆ ಸಿಂಹಸ್ವಪ್ನವಾದ ಕೇತೋಹಳ್ಳಿ ಅರಣ್ಯದಲ್ಲಿರುವ ಆನೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಯಾರಿಗೂ ಹೆದರಲ್ಲ, ನಡೆದದ್ದೇ ದಾರಿ, ತೆಂಗಿನಮರಗಳೇ ಟಾರ್ಗೆಟ್, ಯಾರ ಕಾರ್ಯಾಚರಣೆಗೆ ಜಗ್ಗಲ್ಲ... ಹೀಗೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ರೈತರಿಗೆ ಸಿಂಹಸ್ವಪ್ನವಾಗಿರುವ ಹಂದಿಗೊಂದಿ ಅರಣ್ಯದ ಕೇತೋಹಳ್ಳಿ ಅರಣ್ಯದಲ್ಲಿರುವ ಒಂಟಿ ಸಲಗದ ಉಪಟಳಕ್ಕೆ ಕಡಿವಾಣವೇ ಇಲ್ಲವಾಗಿದೆ.
ಹಂದಿಗೊಂದಿ ಅರಣ್ಯದ ಕೇತೋಹಳ್ಳಿ, ಸಂಗನಬಸವನದೊಡ್ಡಿ, ಅರಳೀಮರದದೊಡ್ಡಿ, ಕೆಂಪನಹಳ್ಳಿ, ಕೆಂಜಿಗರಹಳ್ಳಿ, ಬಸವನಪುರ ವ್ಯಾಪ್ತಿಯಲ್ಲಿ ಓಡಾಟ ನಡೆಸುತ್ತಿರುವ ಒಂಟಿ ಸಲಗ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಆರು ತಿಂಗಳ ಹಿಂದೆ ಕಾವೇರಿ ವನ್ಯಜೀವಿ‘ಧಾಮದಿಂದ ತೆಂಗಿನಕಲ್ ಅರಣ್ಯದ ಮುಖಾಂತರ ಹಂದಿಗೊಂದಿ ಅರಣ್ಯ ಪ್ರದೇಶಕ್ಕೆ ಬಂದಿವ ಒಂಟಿ ಆನೆ ಕೇತೋಹಳ್ಳಿ ‘ಭಾಗದ ಗೊಬ್ಬರದಗಿಡ, ಕೋಣನಕೆರೆ ಅರಣ್ಯದಂಚಿನಲ್ಲಿ ಬೀಡುಬಿಟ್ಟು ಸ್ವಸ್ಥಾನಸತ್ತ ಮುಖ ಮಾಡದೆ ಸುತ್ತಮುತ್ತಲಿನ ಗ್ರಾಮಗಳಿಗೆ ಉಪಟಳ ನೀಡುತ್ತಿದೆ.
ದೊಡ್ಡ ದೊಡ್ಡ ತೆಂಗಿನಮರಗಳೇ ಇದರ ಟಾರ್ಗೆಟ್ ಆಗಿದ್ದು, ರೈತರಲ್ಲಿ ‘ಯದ ನೆರಳನ್ನು ಸೃಷ್ಟಿಸಿದೆ. ಇಂತಹ ಆನೆಯನ್ನು ಕಾರ್ಯಾಚರಣೆ ನಡೆಸಿ ಬೇರೆಡೆಗೆ ಅಟ್ಟದೆ ಆನೆ ಸೆರೆಹಿಡಿದು ಶಿಬಿರಕ್ಕೆ ಸೇರಿಸಬೇಕು. ಆಗ ಮಾತ್ರ ಇದರ ಉಪಟಳಕ್ಕೆ ಬ್ರೇಕ್ ಹಾಕಬಹುದು ಎನ್ನುತ್ತಾರೆ ಕೇತೋಹಳ್ಳಿಯ ರೈತ ಚನ್ನವೀರಯ್ಯ.
ಒಂಟಿ ಸಲಗ ಕೇತೋಹಳ್ಳಿ ಕೋಣನಕೆರೆ, ತುಂಬೇನಹಳ್ಳಿ ಸೀಗೆಬೈಲು ಪ್ರದೇಶದಲ್ಲೇ ಓಡಾಟ ನಡೆಸುತ್ತಾ ಬೇರೆ ಹಿಂಡಿನ ಆನೆಗಳ ಜತೆ ಸೇರದೆ ಪುಡಿ ರೌಡಿಯಂತೆ ವರ್ತಿಸುತ್ತಿದೆ. ಅರಣ್ಯ ಇಲಾಖೆ ಆರು ತಿಂಗಳಿಂದಲೂ ಇದರ ಬೆನ್ನುಹತ್ತಿ ಕಾರ್ಯಾಚರಣೆ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಸೆರೆಹಿಡಿದು ಆನೆ ಶಿಬಿರಕ್ಕೆ ಸೇರಿದರಷ್ಟೇ ಕಾಟ ತಪ್ಪಬಹುದು ಎನ್ನುತ್ತಾರೆ ರೈತರು.
ಕಳೆದ ತಿಂಗಳು ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಎರಡು ಒಂಟಿ ಆನೆ ಸೆರೆಹಿಡಿಯಲಾಯಿತು. ಅದೇ ರೀತಿ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿರುವ ಒಂಟಿ ಆನೆ ಸೆರೆಗೆ ಇಲಾಖೆ ಡಿಎಫ್ಒ ಅವರು ಪತ್ರ ಬರೆದು ಆನೆ ಸೆರೆಗೆ ಅನುಮತಿ ಕೇಳಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ತೆಂಗಿನಮರದ ಸುಳಿ ಕಿತ್ತು ತಿನ್ನುವ ಒಂಟಿ ಸಲಗ ಅದರ ರುಚಿಯಲ್ಲಿ ಏನೋ ಕಂಡಿದ್ದು ತೆಂಗಿನಮರ ಉರುಳಿಸಿ ಸುಳಿಕಿತ್ತು ತಿಂದು ರುಚಿ ಕಂಡಿದೆ. ಇದರ ಜೊತೆಗೆ ಬಾಳೆ, ಸೋಟ, ತರಕಾರಿ ತೋಟಗಳು ಲೆಕ್ಕಕ್ಕೆ ಇಲ್ಲದಷ್ಟು ನಾಶವಾಗಿವೆ.
=
ಎಚ್.ಎ. ಇಕ್ಬಾಲ್ ಹುಸೇನ್, ಶಾಸಕರು
ಹಂದಿಗೊಂದಿ ಅರಣ್ಯದಲ್ಲಿನ ಒಂಟಿ ಆನೆ ಉಪಟಳ ಹೆಚ್ಚಾಗಿದ್ದು, ಅದನ್ನು ಸೆರೆಹಿಡಿದು ಶಿಬಿರ ಸೇರಿಸಲು ಈಗಾಗಲೇ ಸಂಬಂ‘ಪಟ್ಟ ಡಿಎಫ್ಒ ಮತ್ತು ಪಿಸಿಸಿಎ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜತೆಗೆ ಆನೆ ದಾಳಿಯಿಂದ ರೈತರಿಗೆ ಆಗುತ್ತಿರುವ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ನಾಗೇಶ್, ಸಂಗನಬಸನವದೊಡ್ಡಿ
ಒಂಟಿ ಆನೆ ಉಪಟಳ ಮಿತಿಮೀರಿದೆ. ನೂರಾರು ರೈತರು ಒಂಟಿ ಆನೆ ದಾಳಿಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಒಂಟಿ ಆನೆಗಳನ್ನು ಸಾಕಾನೆಗಳ ಮೂಲಕ ಹಿಡಿದು ಆನೆ ಶಿಬಿರಕ್ಕೆ ರವಾನಿಸಿದಾಗ ಮಾತ್ರ ರೈತರು ನೆಮ್ಮದಿಯಾಗಿರಬಹುದು.
ಒಂಟಿ ಆನೆ ಉಪಟಳದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಸುಮಾರು 578 ರೈತರಿಗೆ 50 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಕ್ಟೋಬರ್‌ನಿಂದ ಇಲ್ಲಿಯವರೆಗೆ 200 ಅರ್ಜಿಗಳು ಬಂದಿದ್ದು, ಸುಮಾರು 16 ಲಕ್ಷ ರೂ. ಪರಿಹಾರ ನೀಡಬೇಕಿದೆ. ಜತೆಗೆ ಆನೆ, ಚಿರತೆಯಿಂದ ಆದ ಮಾನವಗಾಯಕ್ಕೆ ಸುಮಾರು 3 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ನಿರಂತರವಾಗಿ ಇಲಾಖೆ ಒಂಟಿ ಆನೆ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಅದು ಮತ್ತೆ ಮತ್ತೆ ವಾಪಸ್ ಬರುತ್ತಿದೆ. ಇದು ಇಲಾಖೆಗೆ ದೊಡ್ಡ ಸವಾಲಾಗಿದೆ. ಮೊಹಮ್ಮದ್ ಮನ್ಸೂರ್ ವಲಯ ಅರಣ್ಯಾಧಿಕಾರಿ, ರಾಮನಗರ