

ಮಂಡ್ಯ: ಹಿಂದು ಸಮುದಾಯದ ಸಂಸ್ಕಾರ, ಸಂಸ್ಕೃತಿ, ಆಚರಣೆ ವೈಜ್ಞಾನಿಕವಾಗಿ ವಿಶ್ವವಾನ್ಯಗೊಂಡಿವೆ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್. ಅರವಿಂದ್ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಕರುನಾಡ ಸಿರಿ ಸಂಪದ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ರಾಜ್ಯ ಟಕದಿಂದ ಭಾನುವಾರ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ, ಸಾಧಕರಿಗೆ ಪುರಸ್ಕಾರ, ರಾಜ್ಯ ಮಟ್ಟದ ಕವಿಗೋಷ್ಠಿ ಸವಾರಂಭ ಉದ್ಘಾಟಿಸಿ ವಾತನಾಡಿದರು. ಹಿಂದು ಸಮುದಾಯದಲ್ಲಿ ಜನಿಸಿ ಅದೇ ಧರ್ಮವನ್ನು ನಿಂದಿಸುವುವವರನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಹಿಂದು ಧರ್ಮವನ್ನು ನಿಂದಿಸುವುದು, ತೇಜೋವಧೆ, ಅವಹೇಳನಕಾರಿಯಾಗಿ ಹೇಳಿಕೆ ನೀಡುವ ಕೆಲ ಬುದ್ಧಿಜೀವಿಗಳನ್ನು ನಡೆ ಖಂಡನೀಯ ಎಂದರು.
ಇಂದಿನ ಸಾಹಿತಿಗಳು ಸವಾಜ ಕಟ್ಟುವ, ಸಂಸ್ಕಾರ, ವಿಜ್ಞಾನ, ವೈಜ್ಞಾನಿಕ ಮೌಲ್ಯಗಳ ಬಗ್ಗೆ ಬರೆಯಬೇಕಿದೆ. ಇನ್ನೊಬ್ಬರ ತೇಜೋವಧೆ, ನಿಂದನೆಗೊಳಿಸುವ ಬರಹ, ಸಾಹಿತ್ಯ, ಕೃತಿಗಳು ಸವಾಜಕ್ಕೆ ವಾರಕ ಎಂಬುದನ್ನು ಮರೆಯಬಾರದು. ಸ್ಥಳೀಯ ಜನಜೀವನ, ಸಾಂಸ್ಕೃತಿಕ ವೈಭವವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡಲಿ ಎಂದರು.
ಸಾಹಿತಿ ಪ್ರೊ.ಜಿ.ಟಿ. ವೀರಪ್ಪ ವಾತನಾಡಿ, ಸಾಹಿತಿಗಳು ಕಲಾವಿದ, ಸಂಟಕರೂ ಆಗಬೇಕಿದೆ. ಆಗ ಹೆಚ್ಚು ಅನುಭವಗಳನ್ನು ಪಡೆದು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಬರುತ್ತದೆ. ಕವಿತೆ, ಕವನಗಳಲ್ಲಿ ವೈವಿಧ್ಯತೆ ಇರಬೇಕು. ವಾಸ್ತವಿಕ ಸತ್ಯಗಳು, ಕಂಡ ಅನುಭವಗಳು ಅಕ್ಷರಗಳಾಗಿ ರೂಪುಗೊಳ್ಳಬೇಕಿದೆ ಎಂದು ಕಿವಿವಾತು ಹೇಳಿದರು.
ವೇದಿಕೆ ಸಂಸ್ಥಾಪಕ ಕಟ್ಟೆ ಎಂ.ಎಸ್. ಕೃಷ್ಣಸ್ವಾಮಿ, ನಿವೃತ್ತ ಪ್ರಾಂಶುಪಾಲೆ ಲಲಿತಾ ಕೆ.ಆಚಾರ್, ಜಿಲ್ಲಾ ಕಸಾಪ ವಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಉಪನ್ಯಾಸಕ ಗಿರೀಶ್ ಗಾಣದಾಳು, ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ, ವೈ.ಎಚ್.ರತ್ನಮ್ಮ, ರಾಜೇಶ್ವರಿ ಚಿತ್ರದುರ್ಗ ಇತರರಿದ್ದರು.