

ಬೆಟ್ಟದಪುರ: ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ತ ಜಂಟಿ ನಿರ್ದೇಶಕರ ಕಚೇರಿ ವಿಭಾಗಿಯ ಕಾರ್ಯದರ್ಶಿ ಪುಷ್ಪಲತಾ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಶಾಲೆಯ ಪ್ರತಿ ತರಗತಿಗೂ ಭೇಟಿ ನೀಡಿ ಮಕ್ಕಳನ್ನು ಓದಿಸಿ, ಬರವಣಿಗೆ ಹಾಗೂ ಎಲ್ಲ ವಿಷಯವಾರು ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು. ಅಕ್ಷರ ದಾಸೋಹದ ದಾಸ್ತಾನು ಕೊಠಡಿ, ಬಿಸಿಯೂಟ ನಿರ್ವಹಣೆ, ಎಲ್ಲ ದಾಖಲಾತಿ ಪುಸ್ತಕಗಳು ಪರಿಶೀಲಿಸಿದರು. ಬಳಿಕ ಶಾಲೆಯಲ್ಲಿ ಸ್ವಚ್ಛತೆ ನಿರ್ವಹಣೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್, ಮುಖ್ಯಶಿಕ್ಷಕ ಕೆ.ಸಿ.ಸತೀಶ್, ಶಿಕ್ಷಕರಾದ ಎಂ.ವಿದ್ಯಾಶ್ರೀ, ಶಾಝಿಯಾ ಪರ್ವೀನ್, ಉಮಾಶ್ರೀ, ಚಂದ್ರಶೇಖರ, ನಾಗರತ್ನ, ರುಕ್ಕಿಣಿ, ನಂದಿನಿ, ಜಬಿನಾ ಬೇಬಿ, ಸ್ವಾತಿ ಇದ್ದರು.