11 ವರ್ಷವಾದರೂ ಪತ್ತೆಯಾಗದ ಹಂತಕರು : ಪುಷ್ಪಲತಾ ಹತ್ಯೆ ಪ್ರಕರಣ : ಪ್ರಗತಿ ಕಾಣದ ತನಿಖೆ

New Project (30)
Published on

ಉಪ್ಪಿನಂಗಡಿ: ಹಿರೇಬಂಡಾಡಿ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಗುರುಮೂರ್ತಿ ಅವರ ಪತ್ನಿ ಪುಷ್ಪಲತಾ(34) ಎಂಬುವರನ್ನು ಹಾಡಹಗಲೇ ಉಪ್ಪಿನಂಗಡಿಯ ಅವರ ಮನೆಯಲ್ಲಿ ಕತ್ತು ಕೊಯ್ದು ಕೊಲೆಗೈದ ಪ್ರಕರಣಕ್ಕೆ ಬುಧವಾರ 11 ವರ್ಷ ಪೂರ್ಣಗೊಂಡರೂ ಹಂತಕನ ಪತ್ತೆಯಾಗಿಲ್ಲ.

ಪುಷ್ಪಲತಾ ಮೈಸೂರು ಮೂಲದವರಾಗಿದ್ದು, ಉಪ್ಪಿನಂಗಡಿಯ ಬಾಡಿಗೆ ಮನೆಯಲ್ಲಿ 5 ಜೂನ್ 2014ರಂದು ಮಾರಕಾಯುಧದಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಕೊಲೆಗೀಡಾಗಿದ್ದರು. ಪ್ರಕರಣದ ತನಿಖೆಯಲ್ಲಿ ಗುರುಮೂರ್ತಿ ಮೇಲೆ ಸಂಶಯ ಇತ್ತಾದರೂ ವಿಚಾರಣೆಯಲ್ಲಿ ಪೂರಕ ಯಾವುದೇ ಮಾಹಿತಿ ಪೊಲೀಸರಿಗೆ ದೊರೆತಿಲ್ಲ ಎನ್ನಲಾಗಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 11ರ ಮಧ್ಯೆ ಕೊಲೆ ನಡೆದಿದ್ದು, ಗುರುಮೂರ್ತಿ ಶಾಲೆಯಲ್ಲಿ ಕರ್ತವ್ಯದಲ್ಲಿರುವುದು ದೃಢಪಟ್ಟಿದೆ.

ಪುಷ್ಪಲತಾ ಕೊಲೆ ಪ್ರಕರಣ ತನಿಖೆಗೆ ಒಳಪಡಿಸಬೇಕೆಂದು ಪುತ್ತೂರಿನ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠರನ್ನು ಒತ್ತಾಯಿಸಿದ್ದರು. ಪುಷ್ಪಲತಾ ಸಾವಿನ ಪ್ರಕರಣದಲ್ಲಿ ಯಾವುದೇ ಹೆಚ್ಚುವರಿ ಪ್ರಗತಿ ಸಾಧಿಸಲಾಗಿಲ್ಲ ಉಪ್ಪಿನಂಗಡಿ ವೃತ್ತನಿರೀಕ್ಷಕ ರವಿ ಬಿ.ಎಸ್. ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net