

ಚಿಕ್ಕೋಡಿ: ಇಲ್ಲಿನ ಜಿಎಸ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ವೈ.ಹಂಜಿ, ಸಂಸ್ಥಾಪಕ ಚೇರ್ಮನ್ ಶಂಕರ ಮಗದುಮ್ಮ, ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಭಾಗವಹಿಸಿದ್ದರು.
ಪುಷ್ಪಾ ಶಂಕರ ಮಗದುಮ್ಮ ಅವರ ಸ್ಮರಣಾರ್ಥ ಕೊಡಮಾಡುವ `ಪುಷ್ಪಾ ಶಂಕರ ಆದರ್ಶ ಶಿಕ್ಷಕಿ ಪ್ರಶಸ್ತಿ'ಯನ್ನು ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕಿ ಸ್ವಾತಿ ಮಂಗಸೂಳಿ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪ್ರಾಚಾರ್ಯ ವಿವೇಕ ಹಳ್ಕೊಳ್ಳಿ, ಆರ್.ಆರ್.ಪಿಡಾಯಿ, ಮುಖ್ಯಶಿಕ್ಷಕಿ ಭಾಗ್ಯಶ್ರೀ ಪಾಟೀಲ, ಸಂಘವಿ ಪಾಟೀಲ, ಎಸ್.ಕೆ.ಪಾಟೀಲ, ಅದ್ವಿಕಾ ಚೌಗಲೆ, ಶ್ರೇಯಸಿ ಚಿಕುರಡೆ, ಲತಾ ನಲವಾಡೆ ಇತರರಿದ್ದರು.