ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆ

pushpa kiresur
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡಕ್ಕೆ ಹುಬ್ಬಳ್ಳಿಯ ಪುಷ್ಪಾ ಕಿರೇಸೂರ ಆಯ್ಕೆಯಾಗಿದ್ದಾರೆ.

ಬಿಸಿಸಿಐ ಆಯೋಜಿಸಿರುವ ಮಹಿಳಾ ಟ್ವೆಂಟಿ-20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪುಷ್ಪಾ ರಾಜ್ಯ ತಂಡವನ್ನು ಪ್ರತಿನಿಧಿಸುವರು.

ಅ. 17ರಿಂದ ಕೋಲ್ಕತ್​ದಲ್ಲಿ ಮಹಿಳಾ ಟಿ-20 ಪಂದ್ಯಾವಳಿ ಆರಂಭಗೊಳ್ಳಲಿದ್ದು ಉತ್ತರ ಪ್ರದೇಶ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ವಿದರ್ಭ, ಉತ್ತರಾಖಂಡ ಸೇರಿ 7 ತಂಡಗಳ ವಿರುದ್ಧ ಕರ್ನಾಟಕ ಸೆಣಸಲಿದೆ.

ಪುಷ್ಪಾ ಅವರು ಬಿಡಿಕೆ ಸ್ಪೋರ್ಟ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ರೈಲ್ವೆ ಉದ್ಯೋಗಿಯಾಗಿರುವ ಅವರು ವೆಸ್ಟರ್ನ್ ರೈಲ್ವೆ ಪರವಾಗಿಯೂ ಆಡುತ್ತಾರೆ. ಮಧ್ಯಮ ವೇಗದ ಬೌಲರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net