

ಮೈಸೂರು: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪೂರ್ವಿಕ್ ಮತ್ತು ನವಮಿ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದರು.
ಪುರುಷರ 100 ಮೀಟರ್ ಓಟದಲ್ಲಿ ಪೂರ್ವಿಕ್ ಪ್ರಥಮ, ಮತಿನ್ ದ್ವಿತೀಯ, ಪವನ್ ತೃತೀಯ ಹಾಗೂ ಮಹಿಳೆಯರ 100 ಮೀಟರ್ ಓಟ ಸ್ಪರ್ಧೆಯಲ್ಲಿ ನವಮಿ ಪ್ರಥಮ, ಲೇಖನಾ ದ್ವಿತೀಯ ಸ್ಥಾನ ಗಳಿಸಿದರು.