ಪೂರ್ವ ಜಗದ್ಗುರುಗಳ ಕತೃ ಗದ್ದುಗೆಗಳ ಜೀರ್ಣೋದ್ಧಾರ

270922 Ujjini Bhoomipuja
ಕೊಟ್ಟೂರು ತಾಲೂಕಿನ ಉಜ್ಜಿನಿ ಪೀಠದಲ್ಲಿ ಪೂರ್ವ ಶಿವಾಚಾರ್ಯರ ಕತೃ ಗದ್ದುಗೆಗಳ ಶಿಲಾಮಂಟಪದ ಭೂಮಿಪೂಜೆ ಶ್ರೀ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಿತು.
Published on

ಉಜ್ಜಿನಿ: ಇಲ್ಲಿನ ಪೂರ್ವ ಜಗದ್ಗುರುಗಳ ಕತೃ ಗದ್ದುಗೆಗಳ ಜೀರ್ಣೋದ್ಧಾರ ಮಾಡುವುದಾಗಿ ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ಪೀಠದಲ್ಲಿ ಪೂರ್ವ ಉಜ್ಜಿನಿ ಪೀಠಾಚಾರ್ಯರಾದ ಶ್ರೀ ಚನ್ನಬಸವೇಶ್ವರ ಭಗವತ್ಪಾದರು ಹಾಗೂ ಕೇದಾರ ಪೀಠದ ವಿಶ್ವೇಶ್ವರಲಿಂಗ ಭಗವತ್ಪಾದರ ಕತೃ ಗದ್ದುಗೆಗಳಿಗೆ ಶಿಲಾಮಂಟಪದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಭಕ್ತರ ಆಶಯದಂತೆ ಪೀಠದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪೀಠದ ಪುರೋಹಿತರಾದ ಯು.ಎಂ. ಸಿದ್ಧಲಿಂಗಯ್ಯ, ಬೆಳ್ಳಕಟ್ಟೆ ಲೋಕೇಶ್, ವ್ಯವಸ್ಥಾಪಕ ವೀರೇಶ್, ಮುಖಂಡರಾದ ಎ.ಎಂ. ಚನ್ನವೀರಸ್ವಾಮಿ, ಕಮ್ಮಾರ ಎರಿಸ್ವಾಮಿ, ರಾಚೋಟಪ್ಪ, ಬಂಗಾರಿ ಶಿವಣ್ಣ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net