ಜನಾರ್ದನರೆಡ್ಡಿ ಹೇಳಿಕೆಗೆ ಪುರುಷೋತ್ತಮ ಖಂಡನೆ

Published on

ಮೈಸೂರು: ಮಹಿಷಾ ದಸರಾ ಆಚರಣೆ ಮಾಡಿರುವುದರಿಂದಲೇ ಸಿದ್ದರಾಮಯ್ಯ ಅವರಿಗೆ ಕೇಡುಗಾಲ ಬಂದಿದೆ ಎಂದು ಹೇಳಿಕೆ ನೀಡಿರುವ ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ಹೇಳಿಕೆ ಖಂಡನೀಯ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷರೂ ಅದ ಮಾಜಿ ಮೇಯರ್ ಪುರುಷೋತ್ತಮ ಹೇಳಿದ್ದಾರೆ.

ಮಹಿಷನ ಬಗ್ಗೆ ಸಿದ್ದರಾಮಯ್ಯ ಅವರಿಗೆ ಗೌರವ ಇರಬಹುದಾದರೂ ಮಹಿಷ ದಸರಾ ಆಚರಣೆಗೆ ಎಂದೂ ಒತ್ತು ನೀಡಲಿಲ್ಲ. ಅಲ್ಲದೆ ಮಹಿಷ ದಸರಾವನ್ನು ಕಳೆದ ಹತ್ತು ವರ್ಷಗಳಿಂದ ಸಮಿತಿಯೇ ಆಚರಿಸಿಕೊಂಡು ಬರುತ್ತಿದೆ. ಅದು ಸಿದ್ದರಾಮಯ್ಯ ಅವರು ಆಚರಿಸಿಲ್ಲ ಎಂಬುದರ ಅರಿವು ಜನಾರ್ದನ ರೆಡ್ಡಿ ಅವರಿಗೆ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜನಾರ್ದನ ರೆಡ್ಡಿ ಅವರು ದೇಶದ ಖನಿಜ ಸಂಪತ್ತನ್ನು ಲೂಟಿ ಮಾಡಿ, ವಿದೇಶಕ್ಕೆ ಸಾಗಿಸಿ ಹಣ ಮಾಡಿದ ಲೂಟಿಕೋರ. ಅವರು ಹಣ ಹಂಚಿ ಗೆದ್ದು ಬಂದು ಜನಪ್ರತಿನಿಧಿಯಾಗಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಏನೂ ಆಗಿಲ್ಲ. ಅವರು ಪ್ರಾಮಾಣಿಕರಾಗಿರುವ ಕಾರಣ ಎಲ್ಲ ತನಿಖಾ ಸಂಸ್ಥೆಗಳ ತನಿಖೆಯನ್ನು ಧೈರ್ಯವಾಗಿಯೇ ಎದುರಿಸುತ್ತಿದ್ದಾರೆ. ಹೀಗಾಗಿ ಇವರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net