

ಮೈಸೂರು: ಜೆಇಇ (ಮೇನ್ಸ್) ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಮುಂದಿನ ಜೆಇಇ (ಅಡ್ವಾನ್ಸ್) ಪರೀಕ್ಷೆಗೆ ಹುಣಸೂರು ತಾಲೂಕು ಬಿಳಿಗೆರೆಯ ಅನ್ವೇಷಣಾ ಪದವಿಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪ್ರಕಟಗೊಂಡ ಜೆಇಇ ಮೇನ್ಸ್ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಮುಂದಿನ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿರುವ ಕೆ.ಎಲ್.ಅಮೂಲ್ಯ, ಕೆ.ಆರ್. ವರುಣ್, ಮನೋಹರ್ ಅವರನ್ನು ಸನ್ಮಾನಿಸಿದ ಸಂಸ್ಥೆ ಕಾರ್ಯದರ್ಶಿ ಎಚ್.ಸಿ.ಪ್ರಶಾಂತ್ ಅವರು ಶುಭ ಹಾರೈಸಿದರು. ಉಪಪ್ರಾಂಶುಪಾಲೆ ಆಶಾ ನಂದೀಶ್, ಉಪನ್ಯಾಸಕರಾದ ವಾಸೀಂ ಪಾಷಾ, ರೂಹಿ ಅಫ್ಸಾನಾ, ರಶ್ಮಿ, ಪುನೀತ್ ಕುಮಾರ್, ವೆಂಕಟೇಶ್, ಆಶಾ ರಾಣಿ, ಖುತೇಜಾ ಇತರರು ಇದ್ದರು.