

ಲಿಂಗಸುಗೂರು: ಸೋಂಕು ರಹಿತ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದರಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ ಹೇಳಿದರು.
ಇದನ್ನೂ ಓದಿ: ತಂಬಾಕು ಸೇವಿಸಿದರೆ ರೋಗ ನಿರೋಧಕ ಶಕ್ತಿ ಕುಂಠಿತ
ರಾಷ್ಟ್ರೀಯ ಆರೋಗ್ಯ ಅಭಿಯಾನ ಪ್ರಯುಕ್ತ ಶುಕ್ರವಾರ ತಾಲೂಕಿನ ಈಚನಾಳ ಮತ್ತು ಗೊರೇಬಾಳ ಗ್ರಾಪಂ.ಗಳ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ, ಜಿಪಂ ಸಹಯೋಗದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣದಲ್ಲಿ ವಾಸಿಸುವ ಜನರ ಆರೋಗ್ಯ ಸುರಕ್ಷತೆ ಹಿತದೃಷ್ಟಿಯಿಂದ ಅಭಿಯಾನ ನಡೆಸಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ನೌಕರರು, ಸಂಘ ಸಂಸ್ಥೆ ಮತ್ತು ನಾನಾ ಇಲಾಖೆ ನೌಕರರ ಕಾರ್ಯಪಡೆ ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈಚನಾಳ ಗ್ರಾಪಂ ಅಧ್ಯಕ್ಷೆ ಗಂಗಮ್ಮ ಚೌಹಾಣ, ಕಾರ್ಯದರ್ಶಿ ಶಿವಪ್ಪ, ಗೊರೇಬಾಳ ಗ್ರಾಪಂ ಪಿಡಿಒ ಬಸವರಾಜ, ಕ್ಷಯರೋಗ ಮೇಲ್ವಿಚಾರಕ ರವಿಕುಮಾರ ಹೂಗಾರ, ಅಂಗನವಾಡಿ ಮೇಲ್ವಿಚಾರಕಿ ನಜ್ಮಾ ಬೇಗಂ, ಸಮುದಾಯ ಆರೋಗ್ಯ ಸಹಾಯಕ ಪ್ರತಾಪ, ಪ್ರಮುಖರಾದ ಜಗದೀಶ ಇತರರಿದ್ದರು.