

ಕಾರ್ಕಳ: ಶಿಕ್ಷಣದ ಉದ್ದೇಶ ಸಂಸ್ಕಾರ ಗಳಿಸುವುದು. ಮಾತಾ ಪಿತೃ, ಕಲಿಸಿದ ಗುರು, ವಿದ್ಯೆ ಕಲಿತ ಸಂಸ್ಥೆಯ ಮೇಲೆ ಸದಾ ಗೌರವ ಇರಿಸಿಕೊಳ್ಳಬೇಕು ಎಂದು ನಿರೂಪಕ ಎನ್.ಆರ್.ದಾಮೋದರ ಶರ್ಮ ಹೇಳಿದರು.
ಕಾರ್ಕಳದ ಕ್ರಿಯೆಟೀವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯ ಆವಿರ್ಭವ-2024 ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಮಿಲಾಗ್ರೀಸ್ ಚರ್ಚ್ನ ಧರ್ಮಗುರು ಫರ್ಡಿನಾಂಡ್ ಗೋನ್ಸಾಲ್ವೀಸ್ ಮಾತನಾಡಿ, ಕಲಿಕೆಗೆ ಪೂರಕವಾದ ವಾತಾವರಣವಿರುವಾಗ ನಾವು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಹಸಂಸ್ಥಾಪಕ ಗಣಪತಿ ಭಟ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ತ್ರಿಶಾ ಫೌಂಡೇಶನ್ ಅಧ್ಯಕ್ಷ ಪ್ರಭಾಕರ್ ಭಂಡಾ, ಕ್ರಿಯೆಟೀವ್ ಶಿಕ್ಷಣ ಪ್ರತಿಷ್ಠಾನ ಸಹಸಂಸ್ಥಾಪಕ ಡಾ.ಗಣನಾಥ ಶೆಟ್ಟಿ , ಕ್ರಿಯೇಟಿವ್ನ ಸಹಸಂಸ್ಥಾಪಕ ಗಣಪತಿ ಭಟ್, ಅಶ್ವತ್ ಎಸ್.ಎಲ್., ಆದರ್ಶ್ ಎಂ.ಕೆ. ಉಪಸ್ಥಿತರಿದ್ದರು.
ತ್ರಿಶಾ ಫೌಂಡೇಶನ್ ಕಾರ್ಯದರ್ಶಿ ಸರಿತಾ ಭಂಡಾರಿ ಉಪಸ್ಥಿತರಿದ್ದರು. ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಸುಧಾಕರ್ ಐಡಿ ಸ್ವಾಗತಿಸಿದರು. ಉಪಪ್ರಾಂಶುಪಾಲ ಜೋಯಲ್ ಫರ್ನಾಂಡಿಸ್ ವಂದಿಸಿದರು. ಉಪನ್ಯಾಸಕಿ ಪ್ರಿಯಾಂಕಾ ತೀರ್ಥರಾಮ್ ಕಾರ್ಯಕ್ರಮ ನಿರೂಪಿಸಿದರು.
ಕಳೆದ ವರ್ಷ ನಡೆದ ನೀಟ್, ಜೆಇಇ, ಸಿಇಟಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಗೈದು ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.