

ನೆಲಮಂಗಲ: ನಗರಸಭೆಗೆ ನೂತನ ಅಧ್ಯಕ್ಷರಾಗಿ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಲತಾಹೇಮಂತಕುಮಾರ್ ರಾಜೀನಾಮೆಯಿಂದ ತೆರವಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ ೂಷಿಸಿದರು.
ತಹಸೀಲ್ದಾರ್ ಅಮೃತ್ಆತ್ರೇಶ್, ಹೆಚ್ಚುವರಿ ತಹಸೀಲ್ದಾರ್ ಭಾಗ್ಯಾ, ಪೌರಾಯುಕ್ತ ಮನುಕುಮಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ನಗರಸಭೆ ಆಡಳಿತ ಬಂಡಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ನಗರಕ್ಕೆ ಕುಡಿಯುವ ನೀರು, ಒಳಚರಂಡಿ, ರಸ್ತೆ ಕಾಮಗಾರಿ, ಸ್ವಚ್ಛತೆ ಸೇರಿ ಮೂಲ ಸೌಕರ್ಯಗಳನ್ನು ಶಾಸಕರು ಹಾಗೂ ಎಲ್ಲ ನಗರಸಭೆ ಸದಸ್ಯರ ಮಾರ್ಗದರ್ಶನದಲ್ಲಿ ಕಲ್ಪಿಸಲಾಗುವುದು. ಜತೆಗೆ ಪಾತೀತವಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರ ಸಹಕಾರ ಪಡೆದು ನಗರಸಭೆ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇನೆಂದು ನೂತನ ಅಧ್ಯೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ಭರವಸೆ ನೀಡಿದರು. ನಗರಸಭೆ ಉಪಾಧ್ಯೆ ಸುಜಾತಾಮುನಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ಮೂಡ್, ಮಾಜಿ ಅಧ್ಯೆ ಲತಾಹೇಮಂತ್ಕುಮಾರ್, ಸದಸ್ಯ ಕೆ.ಎಂ.ಶಿವಕುಮಾರ್, ಗಂಗಾಧರ್ರಾವ್, ಎನ್.ಗಣೇಶ್, ವಕೀಲಸಿ.ಪ್ರದಿಪ್, ಎನ್.ಆಂಜಿನಪ್ಪ, ಜಿ.ಆನಂದ್, ನರಸಿಂಹಮೂರ್ತಿ, ಪದ್ಮನಾಭಪ್ರಸಾದ್, ಎಂ.ಎನ್.ಚೇತನ್, ಅಂಜನಮೂರ್ತಿ, ಎ.ಪುರುಷೋತ್ತಮ್, ರಾಜಮ್ಮಪಿಳ್ಳಪ್ಪ, ಪುಷ್ಪಲತಾಮಾರೇಗೌಡ, ಸುಧಾಕೃಷ್ಣಪ್ಪ, ಭಾಗ್ಯನರಸಿಂಹಮೂರ್ತಿ, ಲೋಲಾಗಂಗಾಧರ್, ಭಾರತೀಬಾಯಿ, ದಾಾಯಣಿ ರವಿಕುಮಾರ್, ಶಾರದಾಉಮೇಶ್, ಹೆಚ್ಚುವರಿ ಸದಸ್ಯ ಆಂಜಿನಮೂರ್ತಿ, ಮುನಿರಾಜು, ರಾಮಮೂರ್ತಿ, ಕೃಪಾನಂದ ಇದ್ದರು.
ಶುಭಕೋರಿದ ಗಣ್ಯರು: ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಿಗೆ ಶಾಸಕ ಎನ್.ಶ್ರೀನಿವಾಸ್, ಮಾಜಿ ಎಂ.ಎಲ್ಸಿ ಬಿಎಂಎಲ್ ಕಾಂತರಾಜು, ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಎಂ.ವಿ.ನಾಗರಾಜು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ನೆ.ಯೋ.ಪ್ರಾಧಿಕಾರದ ಸದಸ್ಯ ಬಿನ್ನಮಂಗಲವಾಸು, ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್ಕುಮಾರ್, ಎಸ್.ಮಲ್ಲಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಮಂಜುಳಾಸುರೇಶ್, ಭೂನ್ಯಾಯ ಮಂಡಲಿ ಮಾಜಿ ನಿರ್ದೆಶಕ ಹುಣ್ಣಿಗೆರೆಬಸವರಾಜು, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ವೀರಶೈವ ಮಹಾಸಭಾ ರಾಜ್ಯ ನಿರ್ದೆಶಕ ಮಂಜುನಾಥ್, ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ತಾಲೂಕು ಅಧ್ಯಕ್ಷ ರಾಜಶೇಖರ್, ಮುಖಂಡ ಲೋಕೇಶ್, ಹಾರೋಕ್ಯಾತನಹಳ್ಳಿ ಜಗದೀಶ್, ಜಿ.ಮಾರಯ್ಯ ಶುಭಕೋರಿದರು.