ಪೂರ್ಣಕುಂಭ ಮೆರವಣಿಗೆ ಸೆ.24ರಂದು

Gorebala meeting
ಗೊರೇಬಾಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ದಸರಾ ಹಬ್ಬದ ಪೂರ್ವಭಾವಿ ಸಭೆ ನಡೆಯಿತು. ಅಧ್ಯಕ್ಷ ಲಕ್ಷ್ಮಣ ಮ್ಯಾಕಲ್, ಅಂಗನವಾಡಿ ಮೇಲ್ವಿಚಾರಕಿ ಶ್ರೀದೇವಿ, ನಾಡ ತಹಸೀಲ್ದಾರ್ ಮಿಶ್ರಕೋಟಿ, ಸಿಆರ್‌ಪಿ ಸಂತೋಷ ಕುಮಾರ ಇತರರಿದ್ದರು.
Published on

ಗೊರೇಬಾಳ: ದಸರಾ ಮಹೋತ್ಸವ ನಿಮಿತ್ತ ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷ ಲಕ್ಷ್ಮಣ ಮ್ಯಾಕಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಅಧ್ಯಕ್ಷ ಲಕ್ಷ್ಮಣ ಮ್ಯಾಕಲ್ ಮಾತನಾಡಿ, ದಸರಾ ನಿಮಿತ್ತ ಸೆ.24ರಂದು ಗಾಂಧಿನಗರದ ಆಂಜನೇಯ ದೇವಸ್ಥಾನದಿಂದ ಶಿವಾಲಯ ದೇವಸ್ಥಾನದವರೆಗೆ ದೇವಿ ಮೂರ್ತಿ ಮೆರವಣಿಗೆ ನಡೆಯಲಿದೆ. ಮಹಿಳೆಯರಿಂದ ಪೂರ್ಣ ಕುಂಭ ಕಳಸ ಮತ್ತು ಆಕರ್ಷಕ ಕಲಾ ತಂಡಗಳು ಭಾಗವಹಿಸಲಿವೆ.

ಅಲ್ಲದೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಂಗನವಾಡಿ ಮೇಲ್ವಿಚಾರಕಿ ಶ್ರೀದೇವಿ ಮಾತನಾಡಿ, ಮಹಿಳೆಯರಿಗೆ ಕೆಸರಿನಲ್ಲಿ ಹಗ್ಗ ಜಗ್ಗಾಟ, ರಂಗೋಲಿ, ರೊಟ್ಟಿ ತಟ್ಟುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಕಬಡ್ಡಿ ಪಂದ್ಯ ನಡೆಯಲಿದೆ. ಭಾಗವಹಿಸುವ ತಂಡಗಳು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.

ನಾಡ ತಹಸೀಲ್ದಾರ್ ಮಿಶ್ರ ಕೋಟಿ, ಕಂದಾಯ ನಿರೀಕ್ಷಕ ವೀರೇಶ, ಗ್ರಾಮ ಲೆಕ್ಕಾಧಿಕಾರಿ ಕೆ.ಶ್ರೀನಿವಾಸ್, ಪಿಡಿಒ ಚನ್ನಬಸವ, ಸಿಆರ್‌ಪಿ ಸಂತೋಷ್ ಕುಮಾರ್, ಪ್ರಮುಖರಾದ ವೆಂಕಮ್ಮ, ಅಂಬಮ್ಮ, ಸುಬ್ಬಲಕ್ಷ್ಮೀ ಪತ್ತಿಪಾಟಿ, ವನಮಾಲಾ, ಸರೋಜಾ, ಸಿದ್ದಮ್ಮ ಹಾಗೂ ಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net