ಪೂರ್ಣ ಪ್ರಜ್ಞ ವಿದ್ಯಾಕೇಂದ್ರ ಶಾಲಾ ವಾರ್ಷಿಕೋತ್ಸವ

21
Published on

ಮೈಸೂರು: ಕುವೆಂಪುನಗರದ ನಾಗರಿಕ ವೇದಿಕೆಯ ಪೂರ್ಣ ಪ್ರಜ್ಞ ವಿದ್ಯಾಕೇಂದ್ರ ಶಾಲೆಯ 19ನೇ ವಾರ್ಷಿಕೋತ್ಸವ ಗಾನ ಭಾರತಿ ಸಭಾಂಗಣದಲ್ಲಿ ನಡೆಯಿತು.

ಕೇಂದ್ರ ತೆರಿಗೆ ಇಲಾಖೆಯ ಅಧೀಕ್ಷಕ ಜಿ.ಎನ್.ಶಶಿಧರ್ ಮಾತನಾಡಿ, ಎಲ್ಲ ದೇವಾಲಯಗಳನ್ನು ಸೇವಾ ಹಾಗೂ ಜ್ಞಾನ ಕೇಂದ್ರಗಳಾಗಿ ಬದಲಾಯಿಸಿದರೆ ಸಂಸ್ಕೃತಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಪೂರ್ಣ ಪ್ರಜ್ಞಾ ವಿದ್ಯಾ ಕೇಂದ್ರ ಶಾಲೆಯ ಸೇವೆ ಶ್ಲಾಘನೀಯ ಎಂದರು.

ನಟಿ ಕುಮಾರಿ ಸಾತ್ವಿಕಾ ಮಾತನಾಡಿ, ದಾನದಲ್ಲಿ ವಿದ್ಯಾದಾನ ಶ್ರೇಷ್ಠ. ಪೂರ್ಣಪ್ರಜ್ಞ ವಿದ್ಯಾ ಕೇಂದ್ರ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ರೂಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯ 10 ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ನಟ ಸಂತೋಷ್ ಬಿಲ್ವ, ಅಧ್ಯಕ್ಷ ಕೆ.ಆರ್.ಶ್ರೀರಂಗಯ್ಯ, ಕಾರ್ಯದರ್ಶಿ ಕುಳ್ಳೇಗೌಡ, ಶಾಲಾ ಸಮಿತಿ ಅಧ್ಯಕ್ಷ ಜೆ.ಲೋಕೇಶ್, ಉಪಾಧ್ಯಕ್ಷ ಎಚ್.ಅರವಿಂದ, ಖಜಾಂಚಿ ಎಸ್.ಪಿ.ತ್ಯಾಗರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣ, ಎಚ್.ಕೆ.ಅಪ್ಪಾಜಿಗೌಡ, ಬಿ. ಶಿವಣ್ಣ, ಶೈಲೇಂದ್ರ, ರೇವಣ್ಣ ರಾಜು, ಮುಖ್ಯ ಶಿಕ್ಷಕಿ ಶಾಮಲಾ ದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net